ಎನ್ನೆಂಸಿಯಲ್ಲಿ ಮಾ.6ರಿಂದ 9ರ ತನಕ ಅಂತರ್ ಕಾಲೇಜು ಮಟ್ಟದ ಯುವ ರೆಡ್‌ಕ್ರಾಸ್ ವಾರ್ಷಿಕ ವಿಶೇಷ ಶಿಬಿರ

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯಲ್‌ಕಾಲೇಜಿನಯುವರೆಡ್‌ಕ್ರಾಸ್‌ಘಟಕದ ವತಿಯಿಂದಅಂತರ್‌ಕಾಲೇಜು ಮಟ್ಟದ ವಾರ್ಷಿಕ ವಿಶೇಷ ಶಿಬಿರ ಬನ್ನಿ ಬದಲಾಗೋಣ ಎಂಬ ಶೀರ್ಷಿಕೆಯಡಿಯಲ್ಲಿ ಮಾರ್ಚ್ ೦6ರಿಂದ ೦9ರವರೆಗೆನಾಲ್ಕು ದಿನಗಳ ಕಾಲಕಾಲೇಜುಆವರಣದಲ್ಲಿನಡೆಯಲಿದೆ.ಸತತಐದನೇ ವರ್ಷ ಈ ಶಿಬಿರ ನಡೆಯುತ್ತಿದ್ದು, ವಿವಿಧ ಕಾಲೇಜುಗಳ 80 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವಿವಿಧತರಬೇತುದಾರರಿಂದಮಾನವೀಯ ಸಂಬಂಧಗಳು, ಕಾನೂನು ಮಾಹಿತಿ,ಅರಣ್ಯ ಸಂರಕ್ಷಣೆ ಮಾಹಿತಿ, ಕೊರೋನ ಮಾಹಿತಿ, ಸಕ್ಸೆಸ್, ಭಾಷಣ ಕಲೆ, ಅಗ್ನಿ ಶಮನ ಪ್ರಾತ್ಯಕ್ಷಿಕೆ, ನಿಧಿ ಶೋಧ, ಮೊದಲಾದತರಬೇತಿ ಕಾರ್ಯಕ್ರಮಗಳು ಸೇರಿದಂತೆಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರವನ್ನು ಮಂಗಳೂರು ವಿಶ್ವವಿದ್ಯಾಲಯ ಯುವ ರೆಡ್‌ಕ್ರಾಸ್ ಘಟಕದ ನೋಡಲ್‌ಅಧಿಕಾರಿಡಾ. ಗಣಪತಿ ಗೌಡ ಉದ್ಘಾಟಿಸಲಿದ್ದು, ಅಕಾಡೆಮಿಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದಅಧ್ಯಕ್ಷತೆ ವಹಿಸಲಿದ್ದಾರೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರೊಫೆಸರ್ ಹಾಗೂ ಡೀನ್‌ಆಗಿರುವ ಡಾ. ಮಾಧವ ಪೆರಾಜೆ, ಪ್ರಾಂಶುಪಾಲ ಡಾ. ಕೆ. ಗಿರಿಧರಗೌಡ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೆಟೀವ್ ಸೊಸೈಟಿಯ ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ ಕೆ.ಟಿ. ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪಸ್ ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಜವರೇಗೌಡ ಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಕಾಡೆಮಿಆಫ್ ಲಿಬರಲ್‌ಎಜ್ಯುಕೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್‌ಎನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ, ಶಿಬಿರ ಸಂಯೋಜಕಿಡಾ. ಅನುರಾಧಾ ಕುರುಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.