ನಾಲ್ಕೂವರೆ ಗಂಟೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣ

Advt_Headding_Middle
Advt_Headding_Middle

 

ಸಕಾಲದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಿದ ಪಂಜದ ಆಂಬ್ಯುಲೆನ್ಸ್

ಚಾಲಕ ಪದ್ಮಕುಮಾರ್ ನಾಯರ್ ಕೆರೆ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ

ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೇವಲ 4.30 ಗಂಟೆಗಳಲ್ಲಿ ಆ್ಯಂಬುಲೆನ್ಸ್ ತಲುಪಿಸುವ ಮೂಲಕ ರೋಗಿಗೆ ಚಿಕಿತ್ಸೆಯನ್ನು ಶೀಘ್ರವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಂಜದ ಆ್ಯಂಬುಲೆನ್ಸ್ ಚಾಲಕ ಪದ್ಮಕುಮಾರ್ ನಾಯರ್ ಕೆರೆ ಮತ್ತು ಸಮಾಜ ಸೇವಕ ನಿತಿನ್ ಭಟ್ ನೂಚಿಲ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದು ನಡೆದದ್ದು ನಾಲ್ಕು ದಿನಗಳ ಹಿಂದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರಿಗೆ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ಸುಬ್ರಹ್ಮಣ್ಯ ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವ ಸೌಲಭ್ಯವಿರದಿದ್ದ ಕಾರಣ ಮಂಗಳೂರು ಅಥವಾ ಬೆಂಗಳೂರಿನ ಆಸ್ಪತ್ರೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಯಿತು.

ರೋಗಿಯ ಕುಟುಂಬಸ್ಥರ ಬೇಡಿಕೆಯಂತೆ ಬೆಂಗಳೂರಿನ ಅಸ್ಪತ್ರೆಗೆ ಸಾಗಿಸಬೇಕಾಯಿತು. ಆಗ ಸ್ಥಳೀಯರ ಸಲಹೆಯಂತೆ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಆ್ಯಂಬುಲೆನ್ಸ್ ಸೇವೆಯ ನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಆಂಬ್ಯುಲೆನ್ಸ್ ನ ಪರ್ಮನೆಂಟ್ ಚಾಲಕ ಅಂದು ರಜೆಯಲ್ಲಿದ್ದ ಕಾರಣ ಪಂಜದ ಚಾಲಕ ಪದ್ಮಕುಮಾರ್ ನಾಯರ್ ಕೆರೆ ಬೆಂಗಳೂರಿಗೆ ಹೊರಟರು. ಸುಬ್ರಹ್ಮಣ್ಯದ ಮತ್ತೋರ್ವ ಸಮಾಜ ಸೇವಕ ನಿತಿನ್ ಭಟ್ ನೂಚಿಲ ಜತೆಯಾದರು. ರಾತ್ರಿ 8 ಗಂಟೆಗೆ ಸುಬ್ರಹ್ಮಣ್ಯ ಬಿಟ್ಟ ಆಂಬ್ಯುಲೆನ್ಸ್ 12.25 ಕ್ಕೆ ಬೆಂಗಳೂರು ತಲುಪಿತು. 318 ಕಿ.ಮಿ ದೂರವಿರುವ ಬೆಂಗಳೂರನ್ನು ಕೇವಲ 4.30 ಗಂಟೆಯಲ್ಲಿ ತಲುಪಿ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗುವಂತಾಯಿತು. ಸುಬ್ರಹ್ಮಣ್ಯದಿಂದ ಹಾಸನವರೆಗೆ ಪದ್ಮಕುಮಾರ್ ಚಾಲನೆ ಮಾಡಿದ್ದರೆ, ಅಲ್ಲಿಂದ ಬೆಂಗಳೂರುವರೆಗೆ ನಿತಿನ್ ಭಟ್ ಚಾಲನೆ ಮಾಡಿದ್ದರು.

ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಕರ್ನಾಟಕದ ಸಂಚಾರಿ ದಟ್ಟಣೆ ಹೊಂದಿರುವ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದ್ದು 318 ಕಿಮಿ ರಸ್ತೆಯಲ್ಲಿ ಸರಿ ಸುಮಾರು 7 ಗಂಟೆ ಗಳ ಕಾಲ ಪ್ರಯಾಣ ಸಮಯ ಬೇಕಾಗುತ್ತದೆ. ಹೀಗಿದ್ದರೂ ಆ್ಯಂಬುಲೆನ್ಸ್ ಕೇವಲ 4.30 ಗಂಟೆಗಳಲ್ಲಿ ಬೆಂಗಳೂರು ತಲುಪಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.