Breaking News

ಮಾ.22-23:ಕೋಲ್ಚಾರು ತರವಾಡು ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬದ ತರವಾಡು ದೈವಸ್ಥಾನದಲ್ಲಿ ಮಾ.22 ಮತ್ತು 23 ರಂದು ಶ್ರೀ ಧರ್ಮ ದೈವ,ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಪಾಷಾಣಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ನಡೆಯಲಿರುವುದು.

ಮಾ.15 ರಂದು ಮುಹೂರ್ತದ ಗೊನೆ ಕಡಿಯುವುದು. ಮಾ.23 ರಂದು ಬೆಳಗ್ಗೆ ಉಗ್ರಾಣ ತುಂಬುವ ಕಾರ್ಯಕ್ರಮ, ಸಂಜೆ ಗುರು ಕಾರ್ನೋರಿಗೆ ಅಗೇಲು ಸೇವೆ, ಬಳಿಕ ಕೈವೀದು ನಡೆದು ಬೈನಾಟಿ ದೈವಸ್ಥಾನದ ಸನ್ನಿಧಿಯಿಂದ ಕಳಶ ತರುವುದು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಲಿರುವುದು. ಅನ್ಯಸಂತರ್ಪಣೆಯಾದ ನಂತರ ಧರ್ಮದೈವದ ಉಪದೈವಗಳಾದ ದ್ಯಾವತೆ, ಕೊಲೆಭೂತ, ಅತಿಥಿ ಕಲ್ಲುರ್ಟಿ ದೈವ,ಕುಪ್ಪೆ ಪಂಜುರ್ಲಿ, ಪಿಲಿಭೂತ, ವರ್ಣಾರ ಪಂಜುರ್ಲಿ ದೈವಗಳ ಕೋಲ ನಡೆಯಲಿರುವುದು. ಮಾ.23 ರಂದು ಬೆಳಿಗ್ಗೆ ಪೊಟ್ಟನ್ ದೈವದ ಕೋಲವಾಗಿ ಶ್ರೀ ರಕ್ತೇಶ್ವರೀ ದೈವದ ಕೋಲ ನಡೆಯಿತು.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯಾದ ನಂತರ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮ ದೈವ ಹಾಗೂ ಶ್ರೀ ಪಾಷಾಣ ಮೂರ್ತಿ ದೈವಗಳ ಕಳಿಯಾಟ ಮಹೋತ್ಸವ ನಡೆಯಲಿರುವುದು. ಸಂಜೆ ಗುಳಿಗ ದೈವದ ಕೋಲವಾಗಿ ಬೆಳಕ್ ತಿರಿ ಯಾಗಿ ಅನ್ನಸಂತರ್ಪಣೆ ಯಾಗಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.