Breaking News

ಸುಬ್ರಹ್ಮಣ್ಯ; ಕುಲ್ಕುಂದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

Advt_Headding_Middle
Advt_Headding_Middle

ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ೫೧ನೇ ವರ್ಷದ ಒತ್ತೆಕೋಲ ಸೇವೆ ಹಾಗೂ ಶ್ರೀ ಕೊರತಿ ದೈವದ ೫ನೇ ವರ್ಷದ ನೇಮೋತ್ಸವ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಸಂಪ್ರದಾಯದಂತೆ ನಡೆಯಿತು.


ಮಾ.೨ರಂದು ರಾತ್ರಿ ಶ್ರೀ ಕೊರತಿ ದೈವದ ನಡಾವಳಿ ನಡೆದು ಅನ್ನಸಂತರ್ಪಣೆ ನಡೆಯಿತು. ಮಂಗಳವಾರ ಸಂಜೆ ಭಂಡಾರ ಹೊರಟು, ಬಳಿಕ ಮೇಲೇರಿ ಅಗ್ನಿ ಸ್ಪರ್ಶನಡೆಯಿತು. ಬಳಿಕ ಕುಲ್ಕುಂದ ಶ್ರೀ ಬಸವೇಶ್ವರ ಭಜನಾ ಮಂಡಳಿ, ಸುಬ್ರಹ್ಮಣ್ಯ ಭ್ರಾಮರಿ ಭಜನಾ ಮಂಡಳಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.


ರಾತ್ರಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ ನಡೆದು ಅನ್ನಸಂತರ್ಪಣೆ ಬಳಿಕ ಕುಲ್ಚಾಟ ದೈವದ ನಡಾವಳಿ ನಡೆಯಿತು. ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು. ಬುಧವಾರ ಪ್ರಾತಃ ಕಾಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನಡೆಯಿತು. ಬೆಳಿಗ್ಗೆ ಮಾರಿಕಳ ಗಂಧ ಪ್ರಸಾದ ವಿತರಣೆ ನಡೆದು ಗುಳಿಗ ದೈವದ ನಡಾವಳಿ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಭಟ್, ಮುಖ್ಯ ಪೂಜಾರಿ ರಾಮಚಂದ್ರ, ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟ್ರಾಜ್, ಆಡಳಿತ ಸಮಿತಿ ಕಾರ್‍ಯದರ್ಶಿ ದುಗ್ಗಪ್ಪ ನಾಯ್ಕ್, ಸಂಚಾಲಕ ಹರೀಶ್ ಇಂಜಾಡಿ, ಪ್ರಮುಖರಾದ ವೇಣುಗೋಪಾಲ. ಏನ್.ಎಸ್, ಮಣಿಯಾಣಿ, ರಾಜೇಶ್ ಏನ್.ಎಸ್. ರವೀಂದ್ರ ರುದ್ರಪಾದ, ಎ.ಪಿ. ಗೌಡ, ಚಂದ್ರಶೇಖರ ಮೇಲ್ನಾಡು, ಗೋಪಾಲ ಮಲೆ, ಸೇರಿದಂತೆ ಸಾವಿರಾರು ಭಕ್ತರು ಉಪಸ್ಥರಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.