ಜೇಸಿಐ ಪಂಜ ಪಂಚಶ್ರೀಯಿಂದ ಎಂಪವರಿಂಗ್ ಯೂತ್ ಟ್ರೈನಿಂಗ್ ಕಾರ್ಯಕ್ರಮ

Advt_Headding_Middle
Advt_Headding_Middle

ಜೇಸಿಐ ಪಂಜ ಪಂಚಶ್ರೀಯಿಂದ ಯುವ ಸಬಲೀಕರಣ ಸರಣಿ ತರಬೇತಿ ಕಾರ್ಯಕ್ರಮವು ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆಯಲ್ಲಿ ಮಾ.5ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಎಸ್.ಜಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಅಶೋಕ್ ಕುಮಾರ್ ಕೆ.ಎಸ್ ನೆರವೇರಿಸಿದರು. ಪಂಜ ಜೇಸಿ ಅಧ್ಯಕ್ಷ ನಾಗಮಣಿ ಕೆದಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ.ಎ. ಬ್ಯಾಂಕ್ ಪಂಜದ ನಿವೃತ್ತ ಉಪ ಶಾಖಾಧಿಕಾರಿ ಜಯರಾಂ ಕಂಬಳ ಉಪಸ್ಥಿತರಿದ್ದರು.
ವಲಯ ತರಬೇತುದಾರ ಜೇಸಿ ಸವಿತಾ ಮುಡೂರು ಮೊದಲ ನುಡಿ ನುಡಿದರು. ಜೇಸಿಐ ಪ್ರವೀಣ್ ಕಾಯಾರ ವೇದಿಕೆಗೆ ಆಹ್ವಾನಿಸಿದರು. ಜೇಸಿ ಸುಬ್ರಹ್ಮಣ್ಯ ಕಕ್ಯಾನ ಜೇಸಿ ವಾಣಿ ವಾಚಿಸಿದರು. ಜೇಸಿ ಕೌಶಿಕ್ ಮಣಿವಿಲಾಸ ತರಬೇತುದಾರರನ್ನು ಪರಿಚಯಿಸಿದರು. ಜೇಸಿ ಪ್ರಕಾಶ್ ಆಳ್ಪೆ ಅತಿಥಿಗಳನ್ನು ಪರಿಚಯಿಸಿದರು. ಕಾರ್‍ಯದರ್ಶಿ ಜೇಸಿ ದೇವಿಪ್ರಸಾದ್ ಚಿಕ್ಮುಳಿ ವಂದಿಸಿದರು.
ನಂತರ ವಲಯ ತರಬೇತುದಾರರುಗಳಾದ ಜೇಸಿ ಸವಿತಾರ ಮುಡೂರು, ಜೇಸಿ ಸೋಮಶೇಖರ ನೇರಳ, ಜೇಸಿ ಮಹಾಬಲ ಕುಳ, ಜೇಸಿ ಶಶಿಧರ ಪಳಂಗಾಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವಧ್ಯಕ್ಷ, ವಲಯಾಧಿಕಾರಿ, ಜೇಸಿ ವಾಸುದೇವ ಮೇಲ್ಪಾಡಿ, ಕಾಲೇಜಿನ ಪ್ರಾಂಶುಪಾಲ ಜೇಸಿ ಗುರುಪ್ರಸಾದ್ ತೋಟ ವೇದಿಕೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.