Breaking News

ವೆಂಕಟ್ ವಳಲಂಬೆಯವರಿಂದ ಬೇಜವಾಬ್ದಾರಿ ಹೇಳಿಕೆ

Advt_Headding_Middle
Advt_Headding_Middle

ಬಿಜೆಪಿ ಅಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ಖಂಡನೆ

ಗುತ್ತಿಗಾರು ಗ್ರಾಮದ ಛತ್ರಪ್ಪಾಡಿಯಲ್ಲಿ ಅಳವಡಿಸಿರುವ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಯವರು ನೀಡಿರುವ ಹೇಳಿಕೆಯನ್ನು ಬ್ಲಾಕ್ ಕಾಂಗ್ರೆಸ್ ಹಾಗೂ ಗುತ್ತಿಗಾರು ಗ್ರಾಮ ಕಾಂಗ್ರೆಸ್ ಪದಾಧಿಕಾರಿಗಳು ಖಂಡಿಸಿದ್ದಾರೆ.


ಮಾ.೬ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗುತ್ತಿಗಾರು ಗ್ರಾಮ ಸಮಿತಿ ಅಧ್ಯಕ್ಷ ಸನತ್ ಮುಳುಗಾಡು, “ಛತ್ರಪ್ಪಾಡಿಯಲ್ಲಿ ಅಳವಡಿಸಿರುವ ಬ್ಯಾನರ್ ಹರಿದಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮಂಡಲಾಧ್ಯಕ್ಷರಾದ ವೆಂಕಟ್ ವಳಲಂಬೆಯವರು ಕಾಂಗ್ರೆಸ್‌ನ ಮೇಲೆ ಆರೋಪ ಹೊರಿಸಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಇದು ಖಂಡನೀಯ. ನಾವು ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಹೊರತು ವಿರೋಧ ಮಾಡುವುದಿಲ್ಲ. ಕಾಂಗ್ರೆಸ್ ಹುನ್ನಾರ ಎಂದು ಹೇಳುವ ವೆಂಕಟ್ ವಳಲಂಬೆಯವರು ಪುಣ್ಯ ಕ್ಷೇತ್ರದಲ್ಲಿ ಪ್ರಮಾಣ ಮಾಡಲು ನಾವು ಸಿದ್ಧರಿzವೆ. ಅವರೂ ಬರಲಿ” ಎಂದು ಹೇಳಿದರು.

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಉzಶವನ್ನಿಟ್ಟುಕೊಂಡು ಈ ರೀತಿ ದುರುzಶದ ಹೇಳಿಕೆ ನೀಡುವುದು ಬಿಜೆಪಿಯ ಕೆಲವು ಮುಖಂಡರ ಜಾಯಮಾನ. ಗುತ್ತಿಗಾರು ಗ್ರಾಮದ ಅಭಿವೃದ್ಧಿ ಹೇಗೆ ಇದೆ ಎನ್ನುವುದನ್ನು ಗುತ್ತಿಗಾರು, ಕಮಿಲ-ಛತ್ರಪ್ಪಾಡಿ – ಬಳ್ಪ ರಸ್ತೆಯನ್ನು ನೋಡಿದರೆ ಗೊತ್ತಾಗುತ್ತದೆ. ಆ ಭಾಗದ ಫಲಾನುಭವಿಗಳು ರಸ್ತೆ ಅಭಿವೃದ್ಧಿಗಾಗಿ ಪ್ರತಿಭಟನೆ ನಡೆಸಲು ಸಿದ್ಧರಾಗುತ್ತಿದ್ದಾರೆ ಇದೆಲ್ಲವನ್ನು ಮರೆ ಮಾಚಲು ಕಾಂಗ್ರೆಸ್ ಮೇಲೆ ಬಿಜೆಪಿ ಸುಳ್ಳು ಆರೋಪ ಹೊರಿಸುತ್ತಿದ್ದೆ. ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ಚುನಾವಣೆಯಲ್ಲಿ ಜನರು ನೀಡುತ್ತಾರೆ ಎಂದು ಸನತ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಮಾತನಾಡಿ ‘`ಬಿಜೆಪಿ ಕಾನೂನಿನಲ್ಲಿ ನಡೆಯುತ್ತಿಲ್ಲ. ಬ್ಯಾನರ್ ಹರಿದಿದ್ದರೆ ಈ ಕುರಿತು ದೂರು ನೀಡಬೇಕು. ಬಳಿಕ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳುವಂತೆ ಮಾಡಬೇಕೆ ಹೊರತು ಈ ರೀತಿ ಹಗುರವಾದ ಹೇಳಿಕೆ ನೀಡುವುದು ಖಂಡನೀಯ. ಅವರಿಗೆ ಅವರ ಮನೆಯೊಳಗಿನ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಸಾಧ್ಯವಾಗದಿದ್ದಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಹೇಳಿದ ಅವರು ಡಿಸಿಸಿ ಬ್ಯಾಂಕ್ ಪ್ರಕರಣವನ್ನು ಉಲ್ಲೇಖಿಸಿದರಲ್ಲದೆ, ಎಸ್.ಎನ್.ಮನ್ಮಥ, ಸಂತೋಷ್ ಕುತ್ತಮೊಟ್ಟೆಯವರು ಚುನಾವಣೆಯಲ್ಲಿ ಸ್ಪರ್ಧಿಸುವ ತನಕ ನಮ್ಮ ಅಭ್ಯರ್ಥಿಗಳಲ್ಲ ಎಂದು ಬಿಜೆಪಿ ಸಮಿತಿ ಹೇಳಿಕೆ ನೀಡುತ್ತಿತ್ತು. ಆದರೆ ಗೆದ್ದ ಮೇಲೆ ಮಾತನಾಡುತ್ತಿಲ್ಲ. ಈಗ ಆ ಗೆದ್ದವರೇ ಅಧ್ಯಕ್ಷರಾಗಿದ್ದಾರೆ ಎಂದು ಉದಾಹರಣೆ ಸಹಿತ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗಾರು ಕಾಂಗ್ರೆಸ್ ಪ್ರಮುಖರಾದ ಕೇಶವ ಹೊಸೊಳಿಕೆ, ದಿನೇಶ್ ಸರಸ್ವತಿ ಮಹಲ್ ನಂದರಾಜ್ ಸಂಕೇಶ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.