ಸುಬ್ರಹ್ಮಣ್ಯ : ಗಾಂಗೇಯ ಟ್ರೋಫಿ 2020 ಉದ್ಘಾಟನಾ ಕಾರ್ಯಕ್ರಮ

Advt_Headding_Middle
Advt_Headding_Middle

ಗಾಂಗೇಯ ಕ್ರಿಕೇಟರ್ಸ್ ಸುಬ್ರಹ್ಮಣ್ಯ ಇದರ ವತಿಯಿಂದ ದಿ.ಕೃಷ್ಣಕುಮಾರ್ ರುದ್ರಪಾದ ಅವರ ಸ್ಮರಣಾರ್ಥವಾಗಿ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಮಾ.7 ರಂದು ” ಗಾಂಗೇಯ ಟ್ರೋಫಿ 2020 ” ಆರಂಭಗೊಂಡಿತು.

ಉದ್ಯಮಿ ಹರೀಶ್ ಕಾಮತ್ ಕ್ರೀಡಾಕೂಟ ಉದ್ಘಾಟಿಸಿದರು. ಗಾಂಗೇಯ ಕ್ರಿಕೆಟರ್ಸ್ ನ ಗೌರವ ಅಧ್ಯಕ್ಷ ರವೀಂದ್ರಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರವಿಕಕ್ಕೆಪದವು, ತಾಲ್ಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಗಾಂಗೇಯ ಕ್ರಿಕೆಟರ್ಸ್ ಅಧ್ಯಕ್ಷ ಪ್ರಕಾಶ್ ಸುಬ್ರಹ್ಮಣ್ಯ, ರೊಟೇರಿಯನ್ ಕಿಶೋರ್ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಮೋಹನ್‌ದಾಸ್ ರೈ, ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ರಾಮಕೃಷ್ಣ ಭಟ್, ರಾಜೇಶ್‌, ಪ್ರಸಾದ್ ರೈ ಉಪಸ್ಥಿತರಿದ್ದರು.

ಈ ಸಂದರ್ಭ ಗಾಂಗೇಯ ಕ್ರಿಕೆಟರ್ಸ್ ನ ಸ್ಥಾಪಕ ಕಪ್ತಾನ ಸರ್ವೊತ್ತಮ ಕಾಮತ್ ಹಾಗೂ ಗಾಂಗೇಯ ಕ್ರಿಕೆಟರ್ಸ್ ನ ಸದಸ್ಯ ಅಂತರರಾಷ್ಟ್ರೀಯ ಕ್ರೀಡಾಪಟು ಸುಭಾಷ್ ಅವರನ್ನು ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ರಂಗಯ್ಯ ಶೆಟ್ಟಿಗಾರ್ ಗೌರವಿಸಿದರು. ರತ್ನಾಕರ್ ಸ್ವಾಗತಿಸಿ, ದೀಪಕ್ ನಂಬಿಯಾರ್ ವಂದಿಸಿದರು. ಚಂದಪ್ಪ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.