Breaking News

ಸುಳ್ಯದ ಯಮಹಾ ರಾವ್ ಬೈಕರ್ಸ್ ನಲ್ಲಿ ಫ್ಯಾಸಿನೊ 125 ಎಫ್Iಬಿಡುಗಡೆ

Advt_Headding_Middle
Advt_Headding_Middle

 

ಪ್ರತಿಷ್ಠಿತ ಯಮಹಾ ಕಂಪೆನಿ ವತಿಯಿಂದ ನೂತನವಾಗಿ ಮಾರುಕಟ್ಟೆಗೆ ಬಂದಿರುವ ಫ್ಯಾಸಿನೊ(Fascino) 125 ಎಫ್ I ಬೈಕ್ ನ ಬಿಡುಗಡೆ ಮಾ.4ರಂದು ಸುಳ್ಯ ಓಡಬಾಯಿಯಲ್ಲಿರುವ ರಾವ್ ಬೈಕರ್ಸ್ ನಲ್ಲಿ ನಡೆಯಿತು.


ಪ್ರಥಮ ಗ್ರಾಹಕರಾದ ಅಖಿಲ್ ಎಲ್.ಗೂನಡ್ಕರವರಿಗೆ ಸಂಸ್ಥೆಯ ಮಾಲಕರಾದ ನವೀನ್ ಬಿ.ರಾವ್ ಕೀ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ನ.ಪಂ.ಸದಸ್ಯ ಸುಧಾಕರ ಕೇರ್ಪಳ, ಜೆ.ಎಸ್.ಎಕ್ಸೋಟಿಕ್ ನ ಸುಪ್ರೀತ್ ರೈ,ಸಜಾವತ್ ನ ಮಾಲಕ ಅಜಿತ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಫ್ಯಾಸಿನೊ 125 ಎಫ್I ವಿಶೇಷತೆ;
ಅತ್ಯಾಕರ್ಷಕವಾಗಿರುವ ಫ್ಯಾಸಿನೊ 125 ಎಫ್ I ಬೈಕ್ 125 ಸಿಸಿ ಸಾಮರ್ಥ್ಯ ಹೊಂದಿದ್ದು,30% ಅಧಿಕ ಪವರ್ ಮತ್ತು 16% ಹೆಚ್ಚುವರಿ ಮೈಲೇಜ್ ಹೊಂದಿದೆ.ಸ್ಮಾರ್ಟ್ ಮೋಟಾರ್ ಜನರೇಟರ್ ಸಿಸ್ಟಮ್ ,ಎಫ್1 ಟೆಕ್ನಾಲಜಿ ವ್ಯವಸ್ಥೆ ಅಳವಡಿಸಲಾಗಿದೆ.ಹಗುರ ಮತ್ತು ಬಿಎಸ್6 ಇಂಜಿನ್ ಹೊಂದಿದ್ದು,ಕಡಿಮೆ ಎಕ್ಸ್ ಶೋರೂಂ ಬೆಲೆಯೊಂದಿಗೆ ವಿವಿಧ ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.ಶೋರೂಂ ದರ ರೂ.67080.00ಕ್ಕೆ ಗ್ರಾಹಕರಿಗೆ ದೊರೆಯಲಿದೆ.
ಯುಗಾದಿ ಹಬ್ಬದ ಸಲುವಾಗಿ ಈ ಬೈಕ್ ಖರೀದಿಸುವ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ ಹೆಲ್ಮೆಟ್ ಮತ್ತು ಪುಲ್ ಟ್ಯಾಂಕ್ ಪೆಟ್ರೋಲ್ ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.