Breaking News

ಕೆ.ವಿ.ಜಿ. ಅಮರಜ್ಯೋತಿಯಲ್ಲಿ ಕ್ರ್ಯಾಷ್ ಕೋರ್ಸ್ ಆರಂಭ

Advt_Headding_Middle
Advt_Headding_Middle

ಸುಳ್ಯದಲ್ಲಿ ಯಶಸ್ಸಿನೆಡೆಗೆ ಮುನ್ನಡೆಯುತ್ತಿರುವ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ದೊರಕಿಸಿಕೊಡುವ ಸದುದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ JEE/NEET ಮತ್ತು CET ವಿಷಯಗಳಿಗೆ ಕ್ರ್ಯಾಷ್ ಕೋರ್ಸ್ ಆರಂಭಿಸಲಾಗಿದೆ. ವಾರ್ಷಿಕ ಪರೀಕ್ಷೆಯ ಮರುದಿನದಿಂದ ದಿನಾಂಕ 24.3.2020  ರಿಂದ 1.4.2020ರವರೆಗೆ ಭೌತಶಾಸ್ತ್ರ,ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳಿಗೆ ಹಾಗೂ 12.4.2020 ರಿಂದ 15.4.2020ರವರೆಗೆ ಜೀವಶಾಸ್ತ್ರ ವಿಷಯಗಳಿಗೆ ನುರಿತ ವಿಷಯತಜ್ಞರಿಂದ ತರಬೇತಿ ನೀಡಲಾಗುವುದು. ಪ್ರತೀ ಘಟಕಕ್ಕೂ ಬಹುಆಯ್ಕೆ ಪ್ರಶ್ನೆಗಳನ್ನಾಧರಿಸಿದ ಪಠ್ಯಸಾಮಗ್ರಿ ಲಭ್ಯವಿದ್ದು, ಕೆ.ವಿ.ಜೆ.ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಇತರ ಕಾಲೇಜಿನ ವಿದ್ಯಾರ್ಥಿಗಳಿಗೂ ಅವಕಾಶವಿರುತ್ತದೆ.ದೂರದ ವಿದ್ಯರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಲಭ್ಯವಿರುತ್ತದೆ. ಪ್ರತೀ ಘಟಕಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ನಡೆಸಲಾಗುವುದು. ಪ್ರತಿ ವಿಷಯಕ್ಕೆ ನಿಗದಿತ ಶುಲ್ಕದೊಂದಿಗೆ ಸೀಮಿತ ಸೀಟುಗಳು ಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಾಚಾರ್ಯರಾದ ಡಾ.ಯಶೊದಾ ರಾಮಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 9880014218,7259921480.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.