ಕುಂಬಳೆಯ ಯುವ ಸಂಗಮದಲ್ಲಿ ಉದಯಭಾಸ್ಕರ್ ಸುಳ್ಯರವರ ಧಾರ್ಮಿಕ ಉಪನ್ಯಾಸ

Advt_Headding_Middle
Advt_Headding_Middle

 

ಕುಂಬಳೆ ಆರಿಕ್ಕಾಡಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಸಲಾದ ಯುವ ಸಂಗಮ ಕಾರ್ಯಕ್ರಮದಲ್ಲಿ ಉದಯಭಾಸ್ಕರ್ ಸುಳ್ಯ ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟರು.

‘ಎಲ್ಲಾ ಸಮುದಾಯಗಳಿಗೂ ತನ್ನದೇ ಆದ ವಿಶಿಷ್ಠ‌ ಸಂಪ್ರದಾಯ ಕಟ್ಟುಪಾಡುಗಳನ್ನು ಆಯಾಮ ಸಮುದಾಯದ ಪೂರ್ವಜರು ಹಾಕಿಕೊಟ್ಟಿದ್ದಾರೆ. ಯಾವ ಸಮುದಾಯದ ಆಚರಣೆಗಳೂ ಕೀಳಲ್ಲ, ಮೇಲೂ ಅಲ್ಲ. ಎಲ್ಲಾ ಸಂಪ್ರದಾಯಗಳು ಕೂಡಾ ತಾಯಿ ಭಾರತಿಯ ವೈವಿಧ್ಯಮಯ ಸಂಸ್ಕೃತಿಗೆ ಕೊಡಮಾಡುವ ಕಾಣಿಕೆಗಳಾಗಿವೆ. ಈ ನೆಲದ ಧರ್ಮ ಸಂಸ್ಕೃತಿಯ ಉಳಿವಿಗೆ ಅವುಗಳನ್ನು ಕೇವಲ ಹೊರಗಡೆಯಿಂದ ಬಿಂಬಿಸಿಕೊಂಡರೆ ಸಾಲದು, ಒಳಗಡೆಯೂ ತುಂಬಿಸಿಕೊಳ್ಳಬೇಕಾಗಿದೆ’ ಎಂದವರು ಹೇಳಿದರು.

ವೇದಿಕೆಯಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಇದರ ಪೀಠಾಧೀಶರಾದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕರಾದ ಜಿತೇಂದ್ರ ಪ್ರತಾಪನಗರ ಮುಂತಾದ ಗಣ್ಯರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.