Breaking News

ಅರಂತೋಡು ಸೊಸೈಟಿ ಅಧ್ಯಕ್ಷ ,ಉಪಾಧ್ಯಕ್ಷರಿಗೆ ಡಾ. ಎಂ. ಎನ್ ರಾಜೇಂದ್ರ ಕುಮಾರ್ ರಿಂದ ಅಭಿನಂದನೆ

Advt_Headding_Middle
Advt_Headding_Middle

ಅರಂತೋಡು – ತೊಡಿಕಾನ ಸಹಕಾರ ಸಂಘಕ್ಕೆ ಎರಡನೇ ಬಾರಿಗೆ ಅದ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾಗಿ ಆಯ್ಕೆಯಾದ ದಯಾನಂದ ಕುರುಂಜಿ ಹಾಗು ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ಸಂತೋಷ್ ಚಿಟ್ಟನ್ನೂರು, ನಿಧೀಶ್ ಎ. ಇವರನ್ನು ದ.ಕ.ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅಭಿನಂದಿಸಿದರು.

ಜಂಟಿ ಪಹಣಿ ಪತ್ರ ಹೊಂದಿದ ಕುಟುಂಬದ ಹೊಸ ಸಾಲಗಾರರಿಗೆ NCS ಪಡೆಯಲು ಈ ಬಾರಿ ಅವಕಾಶವಿರಲಿಲ್ಲ. ಈ ಬಗ್ಗೆ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನೊಳಗೊಂಡ ನಿಯೋಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಎಮ್. ಎನ್. ರಾಜೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಹೊಸ ಸದಸ್ಯರಿಗೂ NCS ನೀಡಲು ಅವಕಾಶ ನೀಡಬೇಕೆಂಬ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಸಂಬಂಧಪಟ್ಟ ಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಹಾಗೂ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿ ಎನ್.ಸಿ.ಎಸ್. ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ. ಇದುವರೆಗೆ ಅರ್ಜಿ ಸಲ್ಲಿಸದೇ ಇರುವ ಜಂಟಿ ಪಹಣಿ ಪತ್ರ ಹೊಂದಿರುವ ಕುಟುಂಬದ ಅರ್ಹ ಸದಸ್ಯ ರೈತರು ಎರಡು ದಿನಗಳ ಒಳಗಾಗಿ ಸಹಕಾರಿ ಸಂಘಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.