Breaking News

ಅಡೂರು ಕ್ಷೇತ್ರ ಜಾತ್ರೋತ್ಸವ ಸಮಿತಿಯ ಸಭೆ

Advt_Headding_Middle
Advt_Headding_Middle

ಅಗಲಿದ ಅಪ್ಪಕುಂಞಿ ಗುರುಸ್ವಾಮಿಗೆ ಶ್ರದ್ಧಾಂಜಲಿ ಸಮರ್ಪಣೆ

ಅಡೂರು ಕುಂಬಳೆ ಸೀಮೆಯ ಪ್ರಥಮ ವಂದನೀಯ ಕ್ಷೇತ್ರವೆನಿಸಿದ ಅಡೂರು ಕ್ಷೇತ್ರದಲ್ಲಿ ದಿನಾಂಕ ಮಾ. 11ರಂದು ಧ್ವಜಾರೋಹಣವಾಗಲಿದ್ದು, ಮಾ. 2೦ ರವರೆಗೆ ವೈಭವದ ಜಾತ್ರೋತ್ಸವ ನಡೆಯಲಿದೆ.

ಜಾತ್ರೋತ್ಸವದ ಅಂಗವಾಗಿ ವಿಶೇಷ ಸಭೆಯು ಉತ್ಸವ ಸಮಿತಿಯ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ನಡೆದು ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿತು.
ಉತ್ಸವ ಸಮಯದಲ್ಲಿ ಶುಚಿತ್ವ ಕಾಪಾಡುವುದು, ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿರ್ಣಯ, ಬೆಳಕು ಹಾಗೂ ಶುಭ್ರ ನೀರಿನ ಸರಬರಾಜು ಮಾಡುವುದು, ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಆಡಳಿತದ ಸಹಕಾರ ಪಡೆಯುವುದು. ರಾತ್ರಿ ಉತ್ಸವ ಸಮಯದಲ್ಲಿ ಆರಕ್ಷಕರ ಸೂಕ್ತ ಸಹಕಾರ ಪಡೆಯುವುದು. ಬಂದಂತಹ ಅತಿಥಿಗಳನ್ನು ಸ್ವಾಗತಿಸಿ ಗೌರವಿಸುವುದು ಎಂಬೀ ವಿಷಯವಾಗಿ ಚರ್ಚಿಸಿ ಹೆಚ್ಚು ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ಕ್ಷೇತ್ರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅಡೂರಿನಲ್ಲಿ ಶ್ರೀ ಧರ್ಮಶಾಸ್ತಾರ ಭಜನಾ ಮಂದಿರ ನಿರ್ಮಾಣಕ್ಕೆ ಕಾರಣರಾದ ಅಲ್ಲದೇ ನೂರಿನ್ನೂರು ಶಿಷ್ಟರನ್ನು ಹೊಂದಿ ಕಳೆದ ೩೮ ವರ್ಷಗಳಲ್ಲಿ ನಿರಂತರ ಶಬರಿಮಲೆ ಯಾತ್ರೆ ಮಾಡುತ್ತಿದ್ದು ಮಾ. ೦೬ರಂದು ನಿಧನರಾದ ಅಪ್ಪಕುಂಞಿ ಗುರಸ್ವಾಮಿಯವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಉತ್ಸವ ಸಮಿತಿಯ ಪ್ರತಿನಿಧಿ ಬೆಳ್ಳಿಪ್ಪಾಡಿ ಸದಾಶಿವ ರೈ ನುಡಿ ನಮನ ಸಲ್ಲಿಸಿದರು. ಮೇನೇಜರ್ ಗಂಗಾಧರ ರಾವ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪಾರಂಪರಿಕ ಮನೆತನಗಳ ಸಲಹಾ ಸಮಿತಿ ಸದಸ್ಯರು, ಚೀನಪ್ಪಾಡಿ ರಮೇಶ ಮಣಿಯಾಣಿ, ಡಾ| ಜನಾರ್ಧನ ರಾವ್ ಅಡೂರು, ರವಿಶಂಕರ ನಾಕ್, ರವಿನಾರಾಯಣ ಮಿತ್ತೊಟ್ಟಿ, ರಾಮ ನಾಕ್ ಅಡೂರು, ಬಾಲಕೃಷ್ಣ ಮಾಸ್ತರ್, ಶ್ರೀಪತಿ ರಾವ್ ಗುಂಡಿಮನೆ, ಪಿ. ಧನಂಜಯ, ಅಶೋಕ ನಾಕ್ ತಲಮನೆ ಪಾಂಡಿ, ಗಂಗಾಧರ ಮಾಸ್ತರ್ ಅಡೂರು, ಮೊದಲಾದ ಪ್ರಮುಖರು ಹಾಗೂ ಪ್ರಾದೇಶಿಕ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಗಳು ಸಲಹೆ ಸೂಚನೆ ನೀಡಿದರು. ಸಮಿತಿಯ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.