ರಾಷ್ಟ್ರೀಯ ಕ್ರೀಡಾಪಟು ಆದರ್ಶ್ ಎಸ್.ಪಿ. ಇನ್ಫೋಸಿಸ್‌ಗೆ ಆಯ್ಕೆ

Advt_Headding_Middle
Advt_Headding_Middle


ಸುಳ್ಯ ತಾಲೂಕು ನೆಲ್ಕೂರು ಕೆಮ್ರಾಜೆ ಗ್ರಾಮದ ಜಬಳೆ ಕೃಷಿಕ ಸೋಮಶೇಖರ.ಪಿ. ಹಾಗೂ ನಾರ್ಣಕಜೆ ಶಾಲೆಯ ಶಿಕ್ಷಕಿ ಪೂರ್ಣಿಮಾ ಎಂ.ಆರ್. ಇವರ ಪುತ್ರ ಆದರ್ಶ್ ಎಸ್.ಪಿ. ಇವರು ಪ್ರಸ್ತುತ ಇವರು ಪುತ್ತೂರು ವಿವೇಕಾನಂದ ತಾಂತ್ರಿಕ ವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದು(ಕಂಪ್ಯೂಟರ್ ಸೈನ್ಸ್) ಇನ್ಫೋಸಿಸ್ ಸಂಸ್ಥೆಗೆ ಕ್ಯಾ.ಪಸ್ ಆಯ್ಕೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಮತ್ತು ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ. ನಿರಂತರ ಎಂಟು ವರ್ಷಗಳು ನಿರಂತರವಾಗಿ ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ. ೨೦೧೯ &೨೦ ರಲ್ಲೂ ರಾಜ್ಯದ ಅಂತರ ವಿಶ್ಚವಿದ್ಯಾಲಯದ ಕ್ರೀಡಾಕೂಟದಲ್ಲಿ ರಿಲೇ ಯಲ್ಲಿ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು 2020  ಜನವರಿಯಲ್ಲಿ ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.