ಎಣ್ಮೂರು ಗ್ರಾಮವನ್ನು ಯಥಾಸ್ಥಿತಿ ಮುಂದುವರಿಸಲು ಎಸ್.ಡಿ.ಪಿ.ಐ. ಮನವಿ

Advt_Headding_Middle
Advt_Headding_Middle

ಈ ಹಿಂದೆ ಇದ್ದಂತೆ ಎಣ್ಮೂರು ಗ್ರಾಮ ಪಂಚಾಯತನ್ನು ಮುಂದುವರಿಸಬೇಕೆಂದು ಎಸ್.ಡಿ.ಪಿ.ಐ. ಎಣ್ಮೂರು ಗ್ರಾಮ ಸಮಿತಿ ಪುತ್ತೂರು ಸಹಾಯಕ ಕಮಿಷನರ್ ರಿಗೆ ಮನವಿ ಮಾಡಿಕೊಂಡಿದೆ. 1994 ರಲ್ಲಿ ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಮುರುಳ್ಯ, ಎಣ್ಮೂರು ಗ್ರಾಮಗಳನ್ನು ಒಟ್ಟು ಸೇರಿಸಿ ಎಣ್ಮೂರನ್ನು ಕೇಂದ್ರ ಸ್ತಾನವನ್ನಾಗಿ ಮಾಡಿ ಹೊಸ ಗ್ರಾಮ ಪಂಚಾಯತ್ ರಚನೆ ಮಾಡಲಾಗಿತ್ತು. ಆದರೆ ಸರಕಾರದ ನೂತನ ಆದೇಶದ ಪ್ರಕಾರ ಸದ್ಯ ಸುಳ್ಯ ತಾಲೂಕಿಗೆ ಒಳಪಟ್ಟಿರುವ ಎಣ್ಮೂರು ಮತ್ತು ಮುರುಳ್ಯ ಗ್ರಾಮ ಪಂಚಾಯತಿಗಳಲ್ಲಿ ಎಣ್ಮೂರು ಗ್ರಾಮವನ್ನು ಈಗ ನೂತನವಾಗಿ ರಚನೆ ಗೊಂಡಿರುವ ಕಡಬ ತಾಲೂಕಿಗೆ ಸೇರ್ಪಡೆಗೊಳಿಸಲಾಗಿದೆ.ಹಾಗೂ ಮುರುಳ್ಯ ಗ್ರಾಮವನ್ನು ಸುಳ್ಯ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಈ ಎರಡು ಗ್ರಾಮಗಳು ಈ ಹಿಂದೆ ಎಣ್ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿತ್ತು.
ಮಾತ್ರವಲ್ಲದೆ ಈ ಹಿಂದೆ ಮಂಡಲ ಪಂಚಾಯತ್ ಮತ್ತು ಅದರ ಮೊದಲು ಪಂಚಾಯತ್ ಇದ್ದ ಸಂದರ್ಭದಲ್ಲಿ ಕೂಡ ಇದೇ ಎಣ್ಮೂರು ಗ್ರಾಮವನ್ನು ಕೇಂದ್ರವನ್ನಾಗಿಸಿಕೊಂಡು ಅನೇಕ ವರ್ಷಗಳಿಂದ ಪಂಚಾಯತ್, ಮಂಡಲ ಪಂಚಾಯತ್, ಗ್ರಾಮ ಪಂಚಾಯತ್ ಹೀಗೆ ಎಣ್ಮೂರನ್ನೇ ಕೇಂದ್ರವಾಗಿರಿಸಿಕೊಂಡು ಜನಸಾಮಾನ್ಯರಿಗೆ ಸುಲಭವಾಗಿ ಸಂಪರ್ಕಿಸಲು ಸಾದ್ಯವಾಗುವುದರೊಂದಿಗೆ ಜನಸ್ನೇಹಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು.ಹೇಗೆಂದರೆ 2011-12 ರ ಜನಗಣತಿಯ ಪ್ರಕಾರ 1679 ರಷ್ಟು ಜನಸಂಖ್ಯೆ ಹೊಂದಿರುವ ಮತ್ತು ಸುಸಜ್ಜಿತ ಕಟ್ಟಡ ಇರುವ ಈ ಪಂಚಾಯತ್ ನ ಸಮೀಪದಲ್ಲೇ ಕೆ.ಎಸ್ ಗೌಡ ವಿದ್ಯಾ ಸಂಸ್ಥೆ, ಕೆನರಾ ಬ್ಯಾಂಕ್, ಸರಕಾರಿ ಹೈಸ್ಕೂಲ್, ಪ್ರಾಥಮಿಕ ಶಾಲೆ ಪಶು ಚಿಕಿತ್ಸಾ ಕೇಂದ್ರ, ಗ್ರಾಮ ಕರಣಿಕರ ಕಛೇರಿ, ಲೈಬ್ರರಿ,ಪೆಟ್ರೋಲ್ ಬಂಕ್,ಹಾಗೂ ಐತಿಹಾಸಿಕ ಹಿನ್ನೆಲೆ ಇರುವ ಕೋಟಿ ಚೆನ್ನಯರ ಬೈದರುಗಳ ಗರಡಿ ಕೂಡ ಇದೇ ಎಣ್ಮೂರು ಗ್ರಾಮದಲ್ಲೇ ಇರುವುದಾಗಿದೆ.ಇವೆಲ್ಲಕ್ಕಿಂತ ಮಿಗಿಲಾಗಿ ಸದ್ಯ ಈ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪಡ್ಪಿನಂಗಡಿ,ಕಲ್ಲೇರಿ,ಅಲೆಂಗಾರ,ಉಳ್ಳಲಾಡಿ,ಹೇಮಳ,ಸಮಹಾದಿ, ನರ್ಲಡ್ಕ,ಗುತ್ತಿಗೆ, ಕಟ್ಟ ಕಾಲೋನಿ,ನಿಂತಿಕಲ್,ಗುತ್ತು,ಗರಡಿ,ಅಲೆಕ್ಕಾಡಿ,ಮುಂತಾದ ಊರುಗಳೆಲ್ಲ ಈ ಕೇಂದ್ರಕ್ಕೆ ಅತೀ ಸಮೀಪ ಅಂದರೆ ನಡೆದುಕೊಂಡು ಹೋಗುವ ಅಥವಾ ಸಕಾಲಕ್ಕೆ ಸಾರಿಗೆ ಸಂಪರ್ಕ ಹೊಂದಿರುವ ಊರುಗಳಾಗಿರುತ್ತವೆ.

ಆದರೆ ಈಗ ಮೇಲೆ ತಿಳಿಸಿದ ಅಲೆಕ್ಕಾಡಿ,ಸಮಹಾದಿ,ಮುರುಳ್ಯ ವನ್ನು ಹೊರತುಪಡಿಸಿ ಇತರ ಎಲ್ಲಾ ಊರುಗಳನ್ನು ಎಡಮಂಗಲ ಗ್ರಾಮಕ್ಕೆ ಒಳಪಡಿಸಿರುವುದರಿಂದ ಇಲ್ಲಿನ ಜನ ಸಾಮಾನ್ಯರಿಗೆ ತುಂಬಾ ಕಷ್ಟ ವಾಗುತ್ತದೆ,ಪ್ರಮುಖವಾಗಿ ಈ ಕೇಂದ್ರದಿಂದ 8-10 ಕಿ.ಮಿ ದೂರ ಇರುವುದು ಮಾತ್ರವಲ್ಲದೆ ಸಕಾಲಕ್ಕೆ ಸಾರಿಗೆಯ ವ್ಯವಸ್ಥೆಯು ಸರಿಯಾಗಿ ಇರುವುದಿಲ್ಲ, ತುರ್ತು ಸಂದರ್ಭಗಳಲ್ಲಿ ಆಟೋ ಬಾಡಿಗೆ ಮಾಡಿಕೊಂಡು ಹೋದರು ಹೋಗಿ ಬರಲು 150-200 ದರ ವಾಗುತ್ತದೆ.ಹಾಗು ಮಹಿಳೆಯರಿಗೆ ವ್ರದ್ದರಿಗೆ ಇನ್ನೂ ಹೆಚ್ಚಿನ ಕಷ್ಟಕರವಾಗಿದೆ.ಹಾಗೂ ತುಂಬಾ ಸಮಯ ಕೂಡ ವ್ಯರ್ಥವಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ಎಣ್ಮೂರು ಗ್ರಾಮ ಪಂಚಾಯತ್ ನ್ನು ಎಡಮಂಗಲಕ್ಕೆ ವರ್ಗಾವಣೆ ಮಾಡುವುದಕ್ಕೆ ಈ ಊರಿನ ಎಲ್ಲಾ ನಾಗರಿಕರ,ಎಲ್ಲಾ ರಾಜಕೀಯ ಪಕ್ಷಗಳ, ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಆಕ್ಷೇಪಣೆ ಮತ್ತು ವಿರೋಧ ಕೂಡ ಇದ್ದು, ನ್ಯಾಯ ದೊರಕದಿದ್ದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲು ಕೂಡ ತಯಾರಿಯನ್ನು ನಡೆಸುತ್ತಿದ್ದಾರೆ.

ಆದ್ದರಿಂದ ನೂತನವಾಗಿ ರಚಿಸಲ್ಪಟ್ಟಿರುವ ಕಡಬ ತಾಲೂಕು ಪಂಚಾಯತ್ ನ ಗ್ರಾಮಗಳ ಪೈಕಿ ಸುಳ್ಯ ತಾಲೂಕು ಪಂಚಾಯತ್ ವ್ಯಾಪ್ತಿಯ ಎಣ್ಮೂರು ಮತ್ತು ಮುರುಳ್ಯ ಗ್ರಾಮಗಳನ್ನು ಒಳಗೊಂಡ ಎಣ್ಮೂರು ಗ್ರಾಮ ಪಂಚಾಯತ್ ನ್ನು ಈ ಹಿಂದೆ ಇದ್ದ ಸುಳ್ಯ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲೇ ಹಾಗೂ ಎಣ್ಮೂರು ಗ್ರಾಮ ಪಂಚಾಯತ್ ನ್ನು ಕೇಂದ್ರ ವಾಗಿರಿಸಿಕೊಂಡು ಈ ಹಿಂದೆ ಇದ್ದ ಪದ್ದತಿಯಲ್ಲೇ ಯಥಾಸ್ಥಿತಿಯನ್ನು ಕಾಯ್ದಿರಿಸಿ ಈ ಊರಿನ ನಾಗರಿಕರ ನೋವಿಗೆ ಸ್ಪಂದಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಎಸ್.ಡಿ.ಪಿ.ಐ. ಎಣ್ಮೂರು ಗ್ರಾಮ ಸಮಿತಿ ಅಧ್ಯಕ್ಷ ಹಮೀದ್ ಮರಕ್ಕಡ ಮನವಿಯಲ್ಲಿ ವಿನಂತಿ ಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.