ಕುಕ್ಕೆ ಸುಬ್ರಹ್ಮಣ್ಯ : ಹಸ್ತಪ್ರತಿ ಸಂರಕ್ಷಣಾ ಕಾರ್ಯಗಾರಕ್ಕೆ ಚಾಲನೆ

Advt_Headding_Middle
Advt_Headding_Middle

ಹಸ್ತಪ್ರತಿ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ : ವಿದ್ಯಾಪ್ರಸನ್ನ ಶ್ರೀ

ಹಿಂದಿನ ಹಿರಿಯರು ಶ್ರಮಪಟ್ಟು, ಕಷ್ಟಪಟ್ಟು ರಚಿಸಿದ ಗ್ರಂಥ, ಹಸ್ತಪ್ರತಿಗಳನ್ನು ನಾವುಗಳು ರಕ್ಷಣೆ ಮಾಡದಿದ್ದರೆ ಅವರಿಗೆ ದ್ರೋಹ ಬಗೆದಂತೆ, ಜತೆಗೆ ನಾವೆಲ್ಲ ಅದನ್ನು ಕಳೆದುಕೊಳ್ಳುವ ದಿನಗಳು ಎದುರಾಗಲಿರುವುದರಿಂದ ಹಸ್ತಪ್ರತಿ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕಿದೆ ಎಂದು ಸಂಪುಟ ಶ್ರೀ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.


ಶ್ರೀ ವೇದವ್ಯಾಸ ಸಂಶೋಧನ ಕೇಂದ್ರ, ಕುಕ್ಕೆಶ್ರೀ ಸುಬ್ರಹ್ಮಣ್ಯ ಮಠ, ಕೇಂದ್ರ ಸರಕಾರದ ರಾಷ್ಟ್ರೀಯ ಪಾಂಡುಲಿಪಿ ಮಿಷನ್ ಆಶ್ರಯದಲ್ಲಿ ಮಾ.9ರಿಂದ 29 ರವರೆಗೆ 21 ದಿನಗಳ ಕಾಲ ನಡೆಯುವ ಹಸ್ತಪ್ರತಿ ಸಂರಕ್ಷಣಾ ಕಾರ್ಯಗಾರಕ್ಕೆ ಸೋಮವಾರ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಹಸ್ತಪ್ರತಿ ಸಂರಕ್ಷಣೆ ಜತೆಗೆ ಭಾರತೀಯ ಲಿಪಿಗಳ ಕಲಿಕೆ, ಅಧ್ಯಯನ ಅಗತ್ಯವಾಗಿದ್ದು, ಸಂಶೋಧನಾತ್ಮಕ ಹಂತಗಳಿಂದ ಪ್ರಾಚೀನ ಹಸ್ತಪ್ರತಿಯ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಲಿಪಿಗಳ, ಪ್ರತಿಗಳನ್ನು ಉಳಿಸಿ, ತಿಳಿಸುವ ಕಾರ್ಯವಾಗಬೇಕಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಯದ ಉಪಕುಲಪತಿ ಪ್ರೊ.ಸುಬ್ರಹ್ಮಣ್ಯ ಎಡಪಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಶೋಧನಾತ್ಮಕ ಅಧ್ಯಯನದಲ್ಲಿ ಅದರ ಮೂಲ ಹಾಗೂ ಹಿಂದಿನ ಹಿನ್ನಲೆಗಳು ಅಗತ್ಯವಾಗಿದ್ದು ಅದನ್ನು ಜನರಿಗೆ ತಿಳಿಸಬೇಕು. ಇಂತಹ ಕಾರ್ಯಗಾರದಲ್ಲಿ ಭಾಗವಹಿಸುವವರು ತಮ್ಮನ್ನು ತಾವು ತೊಡಗಿಸಿಕೊಂಡು, ಇತರರಿಗೆ ಮಾಗದರ್ಶಕರಾಗಿ ಮಾಹಿತಿ ನೀಡಬೇಕು ಎಂದ ಅವರು ಒಬ್ಬ ವ್ಯಕ್ತಿಯ ಬರವಣಿಗೆಯ ಶೈಲಿಯಿಂದ ಆತನ ವ್ಯಕ್ತಿತ್ವ ತಿಳಿಯಬಹುದಾಗಿದೆ ಎಂದರು.

ದೆಹಲಿ ಎನ್‌ಎಂಎಂ ಮುಖ್ಯಸ್ಥ ಲಕ್ಷ್ಮೀ ನಾರಾಯಣ ಪಾಣಿಗ್ರ, ಸಂಶೋಧಕರಾದ ಡಾ.ಕೆ.ಎಸ್.ಎನ್.ಉಡುಪ, ಕೆಳದಿ ಸಾಂಸ್ಕೃತಿಕ ಮ್ಯೂಸಿಯಂನ ನಿರ್ದೇಶಕ ಡಾ.ಜಿ.ವಿ.ಕಲ್ಲಪುರ, ರವಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಠದ ಕಾರ್‍ಯದರ್ಶಿ ಕೃಷ್ಣಶರ್ಮ ವಂದಿಸಿದರು. ಬಳಿಕ ಹಸ್ತಪ್ರತಿ ಸಂರಕ್ಷಣೆ ಕುರಿತು ಕಾರ್ಯಗಾರ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.