ಗಾಂಗೇಯ ಟ್ರೋಫಿ ಕ್ರಿಕೇಟ್ ಪಂದ್ಯಾಟ: ಸ್ವಸ್ತಿಕ್ ಪಡ್ಡೆಯೂರ್ ಚಾಂಪಿಯನ್ಸ್

Advt_Headding_Middle
Advt_Headding_Middle

ಸುಮಾರು ೪೦ ವರ್ಷ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯದ ಗಾಂಗೇಯ ಕ್ರಿಕೇಟರ್‍ಸ್ ಆಶ್ರಯದಲ್ಲಿ ದಿ|| ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥವಾಗಿ ನಡೆದ ಗಾಂಗೇಯ ಟ್ರೋಫಿ-೨೦೨೦ಯ ಚಾಂಪಿಯನ್ ಆಗಿ ಸ್ವಸ್ತಿಕ್ ಪಡ್ಡೆಯೂರ್ ತಂಡ ಮೂಡಿ ಬಂದಿದೆ. ಜಿದ್ದಾಜಿದ್ದಿನ ಪೈನಲ್ ಹಣಾಹಣೆಯಲ್ಲಿ ಆರ್.ಎಸ್.ಬಿ ಕಾರ್ಕಳ ತಂಡವನ್ನು ಮಣಿಸಿ ಪಡ್ಡೆಯೂರ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಈ ಮೂಲಕ ಆರು ಅಡಿ ಎತ್ತರದ ಟ್ರೋಫಿ ಮತ್ತು ೩೦ ಸಾವಿರ ನಗದನ್ನು ತನ್ನದಾಗಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ವೇಣುಗೋಪಾಲ್ ಎನ್.ಎಸ್ ಚಾಂಪಿಯನ್ ಪುರಸ್ಕಾರ ಪ್ರಧಾನ ಮಾಡಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಚಾಂಪಿಯನ್ ಚೆಕ್ ಹಸ್ತಾಂತರಿಸಿದರು.
ಅವಿಭಜಿತ ದ.ಕ ಮತ್ತು ಕಾಸರಗೋಡು ಜಿಲ್ಲೆಗಳ ಪ್ರತಿಷ್ಠಿತ ಆಯ್ದ ೨೦ ಅಂಡರ್ ಆರ್ಮ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ದ್ವಿತೀಯ ಸ್ಥಾನಿ ಆರ್.ಎಸ್.ಬಿ ಕಾರ್ಕಳವು ೨೦ ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್ ಮತ್ತು ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಉಮೇಶ್ ಕೆ.ಎನ್ ದ್ವಿತೀಯ ಪುರಸ್ಕಾರ ಪ್ರಧಾನ ಮಾಡಿದರು.
ವೈಯಕ್ತಿಕ ಬಹುಮಾನ:
ಪಂದ್ಯಾಟದ ತೃತೀಯ ಸ್ಥಾನವನ್ನು ಚಕ್ರವರ್ತಿ ಎಣ್ಮೂರು ತಂಡ ಪಡೆದರೆ, ಚತುರ್ಥ ಸ್ಥಾನವನ್ನು ಅತಿಥೇಯ ಗಾಂಗೇಯ ತಂಡ ತನ್ನದಾಗಿಸಿಕೊಂಡಿತು. ಟೀಂ ಕುಂಬ್ಳೆ ತಂಡವು ಶಿಸ್ತುಬದ್ಧ ತಂಡ ಪುರಸ್ಕಾರ ಪಡೆಯಿತು. ಪಡ್ಡೆಯೂರು ತಂಡದ ರವಿ ಪಡ್ಡೆಯೂರ್(ಸರ್ವಾಂಗೀಣ ಆಟಗಾರ), ಆರ್.ಎಸ್.ಬಿಯ ಆಲ್ತಫ್ ವಾಲ್ಪಾಡಿ( ಉತ್ತಮ ದಾಂಡಿಗ), ಸುಜಿತ್ ಕಾರ್ಕಳ( ಉತ್ತಮ ದಾಳಿಗಾರ), ಪಡ್ಡೆಯೂರು ತಂಡದ ಜಮಾಲ್ ನೆಕ್ಕಿಲಾಡಿ( ಉತ್ತಮ ಕ್ಷೇತ್ರ ರಕ್ಷಕ), ಆರ್‌ಎಸ್‌ಬಿಯ ಸಾಹಿಲ್ ಕಾರ್ಕಳ( ಉತ್ತಮ ಗೂಟ ರಕ್ಷಕ) ವೈಯಕ್ತಿಕ ಬಹುಮಾನ ಪಡೆದುಕೊಂಡರು. ಪೈನಲ್ ಪಂದ್ಯಾಟದ ಪ್ರತಿಯೊಂದು ರನ್ನಿಗೆ ರೂ ೭೫ನಂತೆ ವಿಶೇಷ ಬಹುಮಾನವನ್ನು ಪೈನಲ್‌ನಲ್ಲಿ ಆಡಿದ ಅವಳಿ ತಂಡಕ್ಕೆ ವಿತರಿಸಲಾಯಿತು.ಪೈನಲ್ ಪಂದ್ಯಾಟದ ಪ್ರತಿ ಸಿಕ್ಸರ್‌ಗೆ ವಿಶೇಷ ನಗದು ಬಹುಮಾನ ವಿತರಿಸಲಾಯಿತು. ಗಾಂಗೇಯ ತಂಡದ ಹಿರಿಯ ಆಟಗಾರ ಕಲಾವಿದ ಕೆ.ಯಜ್ಞೇಶ್ ಆಚಾರ್, ಗಾಂಗೇಯದ ಹಿರಿಯ ಆಟಗಾರ ಮತ್ತು ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಗಾಂಗೇಯದ ಮಾಜಿ ನಾಯಕ ಉದ್ಯಮಿ ದಿನೇಶ್ ಬಿ.ಎನ್, ಗಾಂಗೇಯ ತಂಡದ ಹಿರಿಯ ಆಟಗಾರ ಗಿರಿಧರ ಸ್ಕಂಧ, ಸಮಾಜಸೇವಕ ರವಿ ಕಕ್ಕೆಪದವು, ಉದ್ಯಮಿ ಭವಾನಿಶಂಕರ ಮಲ್ಲಿಗೆಮಜಲು, ದಾನಿ ವಸಂತ ಶರ್ಮ ಆದಿಸುಬ್ರಹ್ಮಣ್ಯ, ಗ್ರಾ.ಪಂ.ಸದಸ್ಯ ಮೋಹನದಾಸ ರೈ ಬಹುಮಾನ ಹಸ್ತಾಂತರಿಸಿದರು.ಗಾಂಗೇಯ ತಂಡದ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ ವೇದಿಕೆಯಲ್ಲಿದ್ದರು.
ಸನ್ಮಾನ:
ಸಮಾರಂಭದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಅಭಿಜಿತ್.ಎಸ್.ಕೆ ಅವರನ್ನು ಸನ್ಮಾನಿಸಲಾಯಿತು.ಅಲ್ಲದೆ ಅವರಿಗೆ ಸಹಾಯಧನ ಮೂಲಕ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ಗಾಂಗೇಯ ತಂಡದ ಪ್ರಾರಂಭದ ನಾಯಕ ಸುಬ್ರಹ್ಮಣ್ಯ ಶಬರಾಯ, ಗಾಂಗೇಯ ತಂಡದ ಹಿರಿಯ ಗೂಟ ರಕ್ಷಕ ಬಾಲಸುಬ್ರಹ್ಮಣ್ಯ ಭಟ್, ಹಿರಿಯ ಆಟಗಾರ ನವೀನ್ ಮಣಿ, ಮಂಗಳೂರು ವಿ.ವಿ ತರಬೇತುದಾರ ಮತ್ತು ಗಾಂಗೇಯ ತಂಡದ ಮಾಜಿ ನಾಯಕ ಕಿರಣ್ ಅರಂಪಾಡಿ, ರಾಜ್ಯ ಮಟ್ಟದ ಶಟ್ಲ್ ಬ್ಯಾಡ್‌ಮಿಂಟನ್ ಪ್ರತಿಭೆಗಳಾದ ಪ್ರಾರ್ಥನ್.ಎಸ್.ಜಿ ಮತ್ತು ಕಾರ್ತಿಕ್ ಕಕ್ಕೆಪದವು ಅವರನ್ನು ಸನ್ಮಾನಿಸಲಾಯಿತು. ೪.೩೦ ಗಂಟೆಯಲ್ಲಿ ರೋಗಿಯನ್ನು ಬೆಂಗಳೂರಿಗೆ ಆಂಬುಲೆನ್ಸ್ ಮೂಲಕ ತಲುಪಿಸುವಲ್ಲಿ ಶ್ರಮಿಸಿದ ಆಂಬುಲೆನ್ಸ್ ಚಾಲಕ ಹಾಗೂ ಗಾಂಗೇಯದ ಸದಸ್ಯ ನಿತಿನ್ ಭಟ್ ನೂಚಿಲ ಮತ್ತು
ಗೌರವಾರ್ಪಣೆ:
ಸಮಾರಂಭದಲ್ಲಿ ಪಂದ್ಯಾಟದ ನಿರ್ಣಾಯಕರಾದ ಕ್ರಿಕೇಟ್ ತರಬೇತುದಾರ ಪುಷ್ಪರಾಜ್ ಬಿ.ಎಂ. ಮಂಗಳೂರು, ಮೋಹನ್ ಯೆಯ್ಯಾಡಿ, ಹರೀಶ್ ಪಡೀಲ್, ವೀಕ್ಷಕ ವಿವರಣೆಕಾರರಾದ ಉಪನ್ಯಾಸಕ ರಜಾಕ್ ಸಾಲ್ಮರ, ಸುಕುಮಾರ್ ಬೆಂಗಳೂರು ಮತ್ತು ಚಂದ್ರಪ್ಪ ಬೆಳ್ತಂಗಡಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಗಾಂಗೇಯ ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ, ತಂಡದ ಸದಸ್ಯರಾದ ಪವನ್ ಕೇದಿಗೆ ಬನ, ಕೃಷ್ಣ ಮಣಿಯಾಣಿ, ಮೋಹನ್ ಕೆ.ಸಿ, ರತ್ನಾಕರ ಸುಬ್ರಹ್ಮಣ್ಯ, ಉದ್ಯಮಿ ಲೋಕೇಶ್ ಬೆಂಗಳೂರು,ಉತ್ತಮ ನೇರ ಪ್ರಸಾರ ವ್ಯವಸ್ಥೆ ಮಾಡಿದ ಫಾರ್ಚೂನ್ ಟಿವಿಯ ಲೋಕೇಶ್ ಗುಡ್ಡೆಮನೆ, ಅಕ್ಷರಾ ತಂಡದ ನಾಯಕ ವಿನೋದ್ ಪಾಂಡ್ಯನ್ ಹಾಗೂ ಕಲರ್ ಫುಲ್ ಕುಕ್ಕೆ ತಂಡದ ನಾಯಕರನ್ನು ಗೌರವಿಸಲಾಯಿತು.
ಕ್ರೀಡಾಂಗಣದಲ್ಲಿ ಬೃಹತ್ ಟ್ರೋಫಿ
ಅಂತಿಮ ಪಂದ್ಯಾಟದ ಮೊದಲು ಕ್ರೀಡಾಂಗಣದ ಮದ್ಯದಲ್ಲಿ ಬೃಹದಾದ ಪ್ರಥಮ ಮತ್ತು ದ್ವಿತೀಯ ಟ್ರೋಫಿಯನ್ನು ಇರಿಸಿ ಇಕ್ಕೆಲಗಳಲ್ಲಿ
ಅಂತಿಮ ಹಂತ ತಲುಪಿದ ಸ್ವಸ್ತಿಕ್ ಪಡ್ಡೆಯೂರು ಮತ್ತು ಆರ್.ಎಸ್.ಬಿ ಕಾರ್ಕಳ ತಂಡವನ್ನು ಶಿಸ್ತಿನಿಂದ ನಿಲ್ಲಿಸಿ, ಮತ್ತೊಂದು ಭಾಗದಲ್ಲಿ ಗಾಂಗೇಯದ ಸದಸ್ಯರು ನಿಂತು ಶ್ರೀ ದೇವರ ಪ್ರಾರ್ಥನೆ ನೆರವೇರಿಸಿದರು.ಬಳಿಕ ರಾಷ್ಟ್ರಗೀತೆ ಮೊಳಗಿಸಲಾಯಿತು.ರಾಷ್ಟ್ರಗೀತೆಗೆ ಸರ್ವರೂ ಗೌರವಾರ್ಪಣೆ ಸಲ್ಲಿಸಿದ ಬಳಿಕ ಗಣ್ಯರು ಅವಳಿ ತಂಡಕ್ಕೆ ಶುಭಾಶಯ ಹೇಳಿದರು. ಕ್ರೀಡಾಂಗಣದಲ್ಲಿ ಆಟಗಾರರನ್ನು ಹುರಿದುಂಬಿಸಲು ಗಾಂಗೇಯ ತಂಡದ ಸದಸ್ಯ ಶ್ರುತನ್ ನೇತೃತ್ವದಲ್ಲಿ ಬ್ಯಾಂಡ್ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.