Breaking News

ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗದ ವತಿಯಿಂದ ವಿವಿಧ ತರಬೇತಿ ಕಾರ್ಯಕ್ರಮ

Advt_Headding_Middle
Advt_Headding_Middle

ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗದ ವತಿಯಿಂದ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕುರುಂಜಿಭಾಗ್ ಸುಳ್ಯ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ವಿವೇಕಾನಂದ ವೃತ್ತ ಸುಳ್ಯ ಇವುಗಳ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಸತಿ ನಿಲಯದ ವಿದ್ಯಾರ್ಥಿನಿಯರಿಗಾಗಿ ಹದಿಹರೆಯದಲ್ಲಿ ಶುಚಿತ್ವ ಮತ್ತು ಆರೋಗ್ಯದ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ ಉಪಾಧ್ಯಕ್ಷರಾದ  ಪ್ರದೀಪ ಬಾಕಿಲರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಇನ್ನರ್‌ವೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಡಾ| ಹರ್ಷಿತಾ ಪುರುಷೋತ್ತಮರವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಲಯ ತರಬೇತುದಾರರಾದ ಎಅ ಹೇಮಲತಾ ಪ್ರದೀಪ್ ಭಾಗವಹಿಸಿದ್ದರು. ಗೌರವ ಉಪಸ್ಥಿತರಾಗಿ ನಿಲಯ ಮೇಲ್ವಿಚಾರಕಿಯರಾದ ಶ್ರೀಮತಿ ಸುಹಾಸಿನಿ, ಶ್ರೀಮತಿ ಜಲಜಾಕ್ಷಿ ಮತ್ತು ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷರಾದ ಜೇಸಿ ದೇವರಾಜ ಕುದ್ಪಾಜೆ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನು ವಹಿಸಿದ ಜೇಸಿರೆಟ್‌ನ ಅಧ್ಯಕ್ಷರಾದ ಚೈತನ್ಯ ದೇವರಾಜ್‌ರವರು ಸ್ವಾಗತಿಸಿದರು. ಜೇಸಿರೆಟ್ ಪೂರ್ವಾಧ್ಯಕ್ಷರಾದ ಜೇಸಿ ಶೋಭ ಅಶೋಕ ಚೂಂತಾರ್ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ ಪುಟಾಣಿಗಳಾದ ಬೇಬಿ ತನ್ವಿ ಪಿ.ಬಿ. ಮತ್ತು ಆಶಿಕಾ ಚೂಂತಾರು ಜೇಸಿ ವಾಣಿ ವಾಚಿಸಿದರು.
ಈ ಸಂದರ್ಭದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಸಂಯೋಜಕರಾದ ಜೇಸಿ ಅಶೋಕ್ ಚೂಂತಾರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯೋಜನಾ ನಿರ್ದೇಶಕಿ ಕು| ವಿಂಧ್ಯಾ, ಯುವ ಜೇಸಿ ಅಧ್ಯಕ್ಷರಾದ ಚಿತ್ತಾರ ಬಂಟ್ವಾಳ, ನಿಲಯದ ವಿದ್ಯಾರ್ಥಿನಿ ನಾಯಕಿಯರು ವಿವಿಧ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.