Breaking News

ಕುಕ್ಕುಜಡ್ಕ ವಿಷ್ಣು ನಗರ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ೬೬ ನೇ ವರ್ಷದ ಕಾಲಾವಧಿ ಜಾತ್ರೋತ್ಸವ

Advt_Headding_Middle
Advt_Headding_Middle

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 66ನೇ ವರ್ಷದ ಕಾಲಾವಧಿ ವಾರ್ಷಿಕ ಜಾತ್ರೋತ್ಸವವು ಮಾ.9ರಿಂದ ಮಾ.14ರ ತನಕ ನಡೆಯಿತು .

ಮಾ.೯ರಂದು ಪೂರ್ವಾಹ್ನ ಗಣಪತಿ ಹೋಮ ನಂತರ ಸಾರ್ವಜನಿಕ ಶ್ರೀ ಸತ್ಯನಾರಾಯಾಣ ಪೂಜೆಯಾಗಿ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನೆರವೇರಿತು .

ಸಂಜೆ ರಕ್ತೇಶ್ವರಿ ದೈವದ ಭಂಡಾರ ಏರಿ ಬಳಿಕ ಶ್ರೀ ರಕ್ತೇಶ್ವರೀ ದೈವದ ನೇಮೋತ್ಸವ ಜರಗಿತು .

ರಾತ್ರಿ ಶ್ರೀ ಮಹಾವಿಷ್ಣು ಕಲಾಸಂಘ ಕುಕ್ಕುಜಡ್ಕ ಇವರ ಸಹಕಾರದೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು .

 

ವಿದುಷಿ ವಿದ್ಯಾಶ್ರೀ ರಾಧಾಕೃಷ್ಣನ್ ಗಾನ ನೃತ್ಯ ಅಕಾಡೆಮಿ ಸುಳ್ಯ ಶಾಖೆ ಇದರ ಶಿಷ್ಯೆಯರಾದ ವಂದನಾ ಜೋಗಿ ಯಡ್ಕ , ಸುನೀತಾ ಪುಳಿಮಾರಡಕ,ವಿದುಷಿ ನಯನಾ ರೈ ಯವರ ಶಿಷ್ಯ ಜಯಶ್ರೀ ಕುಳ್ಳಂಪಾಡಿ ಅವರಿಂದ ಭರತನಾಟ್ಯ ಶಿವ ತಾಂಡವ ನೃತ್ಯ ಪ್ರದರ್ಶನಗೊಂಡಿತು.

 


ಮಾ.೧೦ರಂದು ರಾತ್ರಿ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯೆಯರಾದ ಆದ್ಯತಾ ಅಖಿಲ ಅಡಿಕೆಹಿತಲು ತನ್ಮಯಿ ಹಾಸನಡ್ಕ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು ರಾತ್ರಿ ಧರ್ಮಸ್ಥಳ ಪಂಜುರ್ಲಿ ಮತ್ತು ಜಾವತೆ ದೈವಗಳ ಸೇವೆಗಳು ನಡೆಯಿತು . ಮಾ.೧೧ರಂದು ಪ್ರಾತಃ ಕಾಲ ಅಗ್ನಿಕುಂಡ ನಿರ್ಮಿಸಿ ಮೇಲೇರಿ ನಿರ್ಮಿಸಲಾಯಿತು . ಅಪರಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹಿಡಿದು ರಾತ್ರಿ ಮೆಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು . ಬಳಿಕ ಪಿಲಿ ಕಜೆ ಶ್ರೀ ಧರ್ಮಶಾಸ್ತ್ರ ಭಜನಾ ತಂಡದವರಿಂದ ಭಜನಾ ಸೇವೆ ನಡೆಯಿತು . ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಇವರ ಕುಸುಮ ಸಾರಂಗ ತಂಡದ ಸದಸ್ಯರಿಂದ ಅಭಿಯಾನ ಎಂಬ ನಾಟಕ ಪ್ರದರ್ಶನಗೊಂಡಿತು. ನಂತರ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಜರಗಿತು . ಬಳಿಕ ಕುಸುಮ ಸಾರಂಗ ತಂಡದವರಿಂದ ಯಕ್ಷಗಾನ ಬಯಲಾಟ- ಕದಂಬ ಕೌಶಿಕೆ ಪ್ರದರ್ಶನಗೊಂಡಿತು .

ಮಾ.೧೨ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆ, ನಂತರ ಬಾರಣೆಯಾಗಿ ಯಂ.ಪಿ.ಜಿ.ಕೆ ಯವರ ಅಶ್ವಥ್ಥವೃಕ್ಷ ಪೂಜೆ ಬಳಿಕ ಶ್ರೀವಿಷ್ಣುಮೂರ್ತಿ ದೈವದ ಪ್ರಸಾದ ವಿತರಣೆ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕ್ಷೀರ ಸೇವನೆ ಮಾಯಿಪಡ್ಕ ಮನೆಯವರಿಂದ ಬಳಿಕ ಶ್ರೀವಿಷ್ಣುಮೂರ್ತಿ ದೈವದ ಪ್ರಸಾದ ವಿತರಣೆ ಮತ್ತು ಭಂಡಾರದ ಲೆಕ್ಕಾಚಾರ ಮಂಡನೆ ನಂತರ ಶ್ರೀ ದೈವದ ಮಾರಿಕಳ ಪ್ರವೇಶ ನಡೆಯಿತು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.