ಸಂಪಾಜೆಯಲ್ಲಿ ೧ ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿ

Advt_Headding_Middle
Advt_Headding_Middle

ಮಾ.21ರಂದು ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ನಿರ್ಮಿಸಲಾಗಿರುವ ಸಂಜೀವಿನಿ ಕಟ್ಟಡ, ವಾಣಿಜ್ಯ ಸಂಕೀರ್ಣದ ಮೇಲ್ಛಾವಣಿ ಕಟ್ಟಡ ಮತ್ತು ಪ್ಲಾಸ್ಟಿಕ್ ಸೌಧ ಸೇರಿದಂತೆ ರೂ.1 ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯು ಮಾ.21ರಂದು ಸಂಪಾಜೆಯಲ್ಲಿ ನಡೆಯಲಿದೆ.

ಈ ಕುರಿತು ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಸುಂದರಿ ಮುಂಡಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಸದಸ್ಯರಗಳಾದ ಜಿ.ಕೆ. ಹಮೀದ್, ನಾಗೇಶ್ ಪಿ.ಆರ್.ರವರು ಮಾ.೧೨ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ವಿವರ ನೀಡಿದರು.

`’ಮಾ.೨೧ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಸುಂದರಿ ಮುಂಡಡ್ಕ ವಹಿಸಲಿದ್ದಾರೇ. ಸಂಜೀವಿನಿ ಕಟ್ಟಡವನ್ನು ಶಾಸಕರ ಅಂಗಾರರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸುವರು. ವಾಣಿಜ್ಯ ಸಂಕೀರ್ಣದ ಮೇಲ್ಛಾವಣಿ ಕಟ್ಟಡವನ್ನು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಪ್ಲಾಸ್ಟಿಕ್ ಸೌಧವನ್ನು ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಉದ್ಘಾಟಿಸುವರು. ಅಲ್ಲದೆ ಗ್ರಾಮ ಪಂಚಾಯತ್‌ನ ವಿವಿಧ ಯೋಜನೆಯಡಿ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆಯೂ ಇದೇ ವೇಳೆ ನಡೆಯಲಿದೆ ಎಂದು ಸೋಮಶೇಖರ ಕೊಯಿಂಗಾಜೆ ವಿವರ ನೀಡಿದರು.
ನಾಳಿದ್ದು ಸುಮಾರು ೧ ಕೋಟಿಗೂ ಮಿಕ್ಕಿ ಕಾಮಗಾರಿಗಳು ಉದ್ಘಾಟನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
೫ ಕೋಟಿಯಲ್ಲಿ ಗ್ರಾಮಾಭಿವೃದ್ಧಿ
ನಾವು ಕಳೆದ ೫ ವರ್ಷಗಳಿಂದ ಸರಕಾರ, ಸಚಿವರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಜಿ.ಪಂ., ತಾ.ಪಂ. ಹೀಗೆ ವಿವಿಧ ಅನುದಾನಗಳನ್ನು ಸೇರಿಸಿಕೊಂಡು ಸುಮಾರು ೫ ಕೋಟಿಗೂ ಮಿಕ್ಕಿ ಅಭಿವೃದ್ಧಿ ನಮ್ಮ ಗ್ರಾಮದಲ್ಲಿ ಆಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.