ಶ್ರೀಮತಿ ಬಿ.ಕೆ. ಲೀಲಾವತಿ ಮುಖ್ಯ ಶಿಕ್ಷಕಿಯವರಿಗೆ ಅನುಪಮಾ ಸೇವಾ ಪ್ರಶಸ್ತಿ

Advt_Headding_Middle
Advt_Headding_Middle

 

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ಹೊಸಕೋಟೆಯ ಮುಖ್ಯ ಶಿಕ್ಷಕಿ ಶ್ರೀಮತಿ ಬಿ.ಕೆ. ಲೀಲಾವತಿಯವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನೀಡಿರುವ ಅನುಪಮ ಸೇವಾ ಪ್ರಶಸ್ತಿ ಲಭಿಸಿದೆ.


ಈ ಪ್ರಶಸ್ತಿಯು ಪ್ರತಿ ಜಿಲ್ಲೆಯಿಂದ ಒಬ್ಬ ಹತ್ರ ಶಿಕ್ಷಕರನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಮಾರ್ಚ್ 8 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವೆ ಶಶಿಕಲಾ ಜೊಲ್ಲೆಯವರು ಪ್ರಶಸ್ತಿ ಪ್ರದಾನಗೈದರು. ಅಯ್ಯಂಗೇರಿ ಗ್ರಾಮದ ಬಾರಿಕೆ ಕುಶಾಲಪ್ಪ ರುಕ್ಮಿಣಿ ದಂಪತಿಯ ಪುತ್ರಿ. ಹಾಲಿ ಪೆರಾಜೆ ಗ್ರಾಮದ ಮಜಿಕೋಡಿ ನಿವೃತ್ತ ಶಿಕ್ಷಕ ತಿಮ್ಮಪ್ಪರವರ ಪತ್ನಿ. ಪ್ರಸ್ತುತ ಶುಂಠಿಕೊಪ್ಪ ನಿವಾಸಿಯಾಗಿದ್ದಾರೆ.

ಇವರು 1990ರಲ್ಲಿ ಹಾಸನ ಜಿಲ್ಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶುಂಠಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಮತ್ತಿಕಾಡು, 2016ರಲ್ಲಿ ಭಡ್ತಿ ಹೊಂದಿ ಮುಖ್ಯ ಶಿಕ್ಷಕಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏಳನೇ ಹೊಸಕೋಟೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟು ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಮಕ್ಕಳಾದ ಎಂ.ಟಿ. ಸೃಜನ್ ಎಂಟೆಕ್ ಪದವೀಧರರಾಗಿ, ಹಾಲಿ ಇನ್ಫೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ ಎಂ.ಟಿ. ಸೌಜನ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.