ಮಾವಿನಪಳ್ಳ ಮಹಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವದಲ್ಲಿ ಗ್ರಾಮ ಸಂಗಮ – 25 ಮಂದಿ ಸಾಧಕರಿಗೆ ಸನ್ಮಾನ

Advt_Headding_Middle
Advt_Headding_Middle

 

ಅಜ್ಜಾವರ ಮಾವಿನಪಳ್ಳ ಮಹಮ್ಮಾಯಿ ದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವ ದಲ್ಲಿ ಮಾ.12ರಂದು ಸಭಾ ವೇದಿಕೆಯಲ್ಲಿ ಗ್ರಾಮ ಸಂಗಮ ಕಾರ್ಯಕ್ರಮ ವಿಶಿಷ್ಠವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದ 25 ಸಾಧಕರನ್ನು ಗೌರವಿಸಲಾಯಿತು.

ಗ್ರಾಮ ಸಂಗಮದ ಅಧ್ಯಕ್ಷತೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ವಹಿಸಿದ್ದರು.

ಚೈತನ್ಯ ಸೇವಾಶ್ರಮದ ಯೋಗೇಶ್ವರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನ.ಸೀತಾರಾಮ ಧಾರ್ಮಿಕ ಉಪನ್ಯಾಸಗೈದರು.

ಶ್ರೀ ಕ್ಷೇತ್ರ ಗ್ರಾ.ಯೋ. ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಮುಖ್ಯ ಅತಿಥಿ ಗಳಾಗಿದ್ದರು.

ಗ್ರಾಮ ಸಂಗಮದಲ್ಲಿ ಸನ್ಮಾನ
ಗ್ರಾಮ ಸಂಗಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ರವಿಪ್ರಕಾಶ್ ಅಟ್ಲೂರು (ಶಿಕ್ಷಣ ಪೋಷಕ), ಕುಟ್ಟಿ ಬೆಳ್ಚಪ್ಪಾಡ (ಧಾರ್ಮಿಕ ಕ್ಷೇತ್ರ), ವೀರಯ್ಯ ಗೌಡ ಪಡ್ಡಂಬೈಲು (ಶಿಕ್ಷಣ ಕ್ಷೇತ್ರ), ರಾಮಕೃಷ್ಣ ಮಾಸ್ತರ್ ಮಂಡೆಕೋಲು (ವಾಸ್ತು ತಜ್ಞರು), ನಾರಾಯಣ ಮಣಿಯಾಣಿ ಕಣೆಮರಡ್ಕ (ನಾಟಿವೈದ್ಯ), ಮಾನ ಪಾಟಾಳಿ ಬಂಟ್ರಬೈಲು (ನಾಟಿ ವೈದ್ಯ), ಜಗದೀಶ್ ರಾವ್ ಕಾಂತಮಂಗಲ (ಕಂಬಳ), ವಿಜೇತ್ ಮೈತಡ್ಕ (ಜನಪದ ಕಲಾವಿದ), ಹೊನ್ನಪ್ಪ ಗೌಡ ಪಡುಮಜಲು (ಅಡ್ಡನಪೆಟ್ಟು), ರಾಮಚಂದ್ರ ಬಟ್ರಮಕ್ಕಿ (ಭತ್ತದ ಬೇಸಾಯ), ಐತ್ತ ಬಯಂಬು (ಶತಾಯುಷಿ), ಮಣೀಶ್ ಮಂಡೆಕೋಲು (ಸ್ಯಾಕ್ಸೋಫೋನ್ ವಾದನ), ಬಾಲಕೃಷ್ಣ ದೊಡ್ಡೇರಿ (ದೈವದ ಮಧ್ಯಸ್ಥ), ಸಣ್ಣರಾಮ ಮುಳ್ಯ (ಸಂಚಾರ ವ್ಯಾಪಾರ), ಶ್ರೀಮತಿ ಬೇಬಿ ಗೋಪಾಲಕೃಷ್ಣ ದಾಸ್ ಕಲ್ತಡ್ಕ (ಜಾತ್ರೆ ವ್ಯಾಪಾರ), ಶ್ರೀಮತಿ ರಾಧಾ ಎನ್ ರೈ ಮೇನಾಲ (ಸಾಮರಸ್ಯ ಮನೆ), ಶೇಷಪ್ಪ ಪಲ್ಲತಡ್ಕ (ಪರಿಸರ ಸಂರಕ್ಷಣೆ), ಕೆ.ಪಿ.ಸೀತಾರಾಮ ಕರ್ಲಪ್ಪಾಡಿ (ಜಲಸಂರಕ್ಷಣೆ), ಕೇಶವ ಉಗ್ರಾಣಿಮನೆ (ಗೋ ಸಂರಕ್ಷಣೆ), ಗುರುರಾಜ್ ಅಜ್ಜಾವರ (ಸಾವಯವ ಕೃಷಿ), ಬಾಲ ಭಾಸ್ಕರ್ ಮುಂಡೋಳಿಮೂಲೆ (ಜ್ಯೋತಿಷ್ಯ), ಹರಪ್ರಸಾದ್ ಬಾಳೆಕೋಡಿ (ಕೃಷಿ ಕ್ಷೇತ್ರ) ಇವರನ್ನು ಗೌರವಿಸಲಾಯಿತು.

ಮಹೇಶ್ ರೈ ಮೇನಾಲ ಸ್ವಾಗತಿಸಿದರು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.