ಸುಳ್ಯ ಸಹಕಾರಿ ಸಂಘದ ಮಹಿಳಾ ಸದಸ್ಯರಿಗೆ ವಿಶೇಷ ತರಬೇತಿ

Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಹಕಾರಿ ಸಂಘಗಳ ಮಹಿಳಾ ನಿರ್ದೇಶಕರಿಗೆ ಸದಸ್ಯರಿಗೆ ಮತ್ತು ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಮಾ.12 ರಂದು ಸುಳ್ಯ ಸಿ ಎ ಬ್ಯಾಂಕಿನ ಸಭಾಭವನದಲ್ಲಿ  ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದ ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆ ಸುಳ್ಯ ಸಿ ಎ ಬ್ಯಾಂಕ್ ನ ಅಧ್ಯಕ್ಷ  ಹರಿಶ್ ಬೂಡುಪನ್ನೆ ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ನಿರ್ದೇಶಕಿ ಶ್ರೀಮತಿ ಸಾವಿತ್ರಿ ರೈ, ಸುಳ್ಯ ಸಿ ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೊತ್ತಮ ಎಸ್.ಪಿ ಉಪಸ್ಥಿತರಿದ್ದರು. ತರಬೇತುದಾರರಾಗಿ ಉಪನ್ಯಾಸಕರಾದ ಶ್ರೀಮತಿ ಇಂದಿರಾ ಬಂಡಾರಿ ತರಬೇತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಮಹಿಳಾ ನಿರ್ದೇಶಕರು, ಸದಸ್ಯರು ಮತ್ತು ನವೋದಯ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ನವೋದಯ ಪ್ರೇರಕಿ ಸಂದ್ಯಾ ಮಂಡೆಕೊಲು ಪ್ರಾರ್ಥಿಸಿದರು ಪುರುಷೋತ್ತಮ ಎಸ್.ಪಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ನಾಗಪ್ರಸಾದ್ ಸುಳ್ಯ ವಲಯದ ನವೋದಯ ಪ್ರೇರಕ ಶ್ರೀಧರ ಮಾಣಿಮರ್ಧು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.