ಎನ್ನೆಂಸಿ: ಅಂತರ್‌ಕಾಲೇಜು ಮಟ್ಟದ ವಿಶೇಷ ಶಿಬಿರ

Advt_Headding_Middle
Advt_Headding_Middle

ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ವಿಮಲ ರಂಗಯ್ಯ

ಮುಂಜಾಗ್ರತೆಯ ಮೂಲಕ ಕೊರೋನಾವನ್ನು ತಡೆಗಟ್ಟಿ – ಪ್ರಮೀಳಾ

 

ಅವರು ಸುಳ್ಯದ ನೆಹರೂ ಮೆಮೋರಿಯಲ್‌ಕಾಲೇಜಿನ ಯುವರೆಡ್‌ಕ್ರಾಸ್‌ಘಟಕದ ವತಿಯಿಂದ ಹಮ್ಮಿಕೊಂಡ ನಾಲ್ಕು ದಿನಗಳ ಅಂತರ್‌ಕಾಲೇಜು ಮಟ್ಟದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯದಕುರಿತುತರಬೇತಿ ನೀಡುತ್ತಾ ಜೀವನಎಂಬುದುಅಮೂಲ್ಯವಾದದ್ದು, ತನ್ನತನವನ್ನು ಉಳಿಸಿಕೊಂಡು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಿರ್ವಹಣೆ ಮಾಡಿದಾಗ ಬದುಕು ಸಾರ್ಥಕವಾಗುತ್ತದೆಎಂದು ವಲಯ ತರಬೇತುದಾರರಾದ ಶ್ರೀಮತಿ ವಿಮಲ ರಂಗಯ್ಯ ಅಭಿಪ್ರಾಯಪಟ್ಟರು.


ಸುಳ್ಯ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಾಣಾಧಿಕಾರಿ ಪ್ರಮೀಳಾ ಕೊರೋನಾ ಕುರಿತು ಮಾಹಿತಿ ನೀಡುತ್ತಾ ಜನರನ್ನು ಬೆಚ್ಚಿ ಬೀಳಿಸಿರುವ ಹಾಗೂ ಭೀಕರವಾಗಿ ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೊರೋನಾವನ್ನು ಮುಂಜಾಗ್ರತೆಯ ಮೂಲಕವಷ್ಟೇ ಸದ್ಯದಲ್ಲಿ ತಡೆಗಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಆಹಾರ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಪ್ರತಿಯೊಬ್ಬರು ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಸುಳ್ಳು ಸುದ್ದಿ ಹಬ್ಬಿಸುವ ಬದಲು ಈ ವೈರಸ್‌ನ ಬಗ್ಗೆ ಅರಿವು, ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ ಎಂದು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.

ಡಾ| ಅನುರಾಧಾಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಉಷಾ ಎಂ ಪಿ, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಧರ ವಿ, ಶಿಬಿರ ಸಂಚಾಲಕ ಅಭಿಜಿತ್ ಟಿ.ಎಲ್, ಶಶಾಂಕ ಪಡ್ಕೆ, ಘಟಕ ನಾಯಕರಾದ ಭುವನ್ ಪಿ, ಬ್ರಿಜೇಶ್ ಕೆ, ಮಹೇಶ್ವರಿ ಪಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.