ಸುಳ್ಯ : ಎಂ.ಬಿ.ಸದಾಶಿವ ರವರಿಗೆ ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯ ತಾಲೂಕು ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿಯ ವತಿಯಿಂದ ಎಂ.ಬಿ.ಸದಾಶಿವ ರವರಿಗೆ ಸನ್ಮಾನ ಕಾರ್ಯಕ್ರಮ ಮಾ.13 ರಂದು ಶ್ರೀರಾಂಪೇಟೆ ಕಾನತ್ತಿಲ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ತಾಲೂಕಿನಾದ್ಯಂತ ಕಾರ್ಯಚರಿಸಿ ಋಣಮುಕ್ತ ಅನುಷ್ಠಾನ ಕಾಯಿದೆಯ ಸಮರ್ಪಕ ಮಾಹಿತಿಯನ್ನು ನೀಡಿ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇ ಗೌಡ ರವರನ್ನು ಬೇಟಿ ಮಾಡಿಸಿ ಮನವಿಯನ್ನು ಸಲ್ಲಿಸಲು ಸಹಕರಿಸಿದ ಎಂ.ಬಿ ಸದಾಶಿವ ರವರನ್ನು ಈ ಸಭೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.


ಸಮಿತಿಯ ಸಂಚಾಲಕ ಹಸೈನಾರ್ ಜಯನಗರ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆ, ಸಮಿತಿಯ ಸದಸ್ಯ ರಾದ ಆನಂದ ಪೈಲಾರು,ಮಹಾಬಲ ರೈ, ಜಯರಾಂ ಶೆಟ್ಟಿ ಪೈಲಾರು ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಯಿತು. ಕೆಲವು ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿಗಳು ಬಡ ಸಾಲ ಸಂತ್ರಸ್ತ ಮಹಿಳೆಯರಿಗೆ ನೀಡುತ್ತಿರುವ ಕಿರುಕುಳ ಹೆಚ್ಚಾಗಿದ್ದು ಅವರ ವಿರುದ್ಧ ಜಿಲ್ಲಾ ಅಧಿಕಾರಿಯವರಿಗೆ ದೂರು ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ನೂರಾರು ಸಾಲ ಸಂತ್ರಸ್ತ ಮಹಿಳೆಯರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.