Breaking News

ನಾಗಪಟ್ಟಣ ಸದಾಶಿವ ದೇವರ ಜಾತ್ರೋತ್ಸವ ಸಂಪನ್ನ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ವೇದಮೂರ್ತಿ ಬ್ರಹ್ಮಶ್ರೀ ಆರೋತ್ ದಾಮೋದರ ತಂತ್ರಿವರ್ಯರ ನೇತೃತ್ವದಲ್ಲಿ ಮಾ.೧೧ರಿಂದ ೧೩ ರವರೆಗೆ ನಡೆಯಿತು.ಮಾ.೧೧ರಂದು ಬೆಳಗ್ಗೆ ಉಷಾಪೂಜೆಯಾಗಿ ಗಣಪತಿ ಹವನ ನಡೆದು ಉಗ್ರಾಣ ತುಂಬಿಸಲಾಯಿತು.

ಮಧ್ಯಾಹ್ನ ಮಹಾಪೂಜೆ ಯಾಗಿ ಪ್ರಸಾದ ವಿತರಣೆ ಸಂಜೆ ನಾಗಪಟ್ಟಣ ಶ್ರೀ ಶಾಸ್ತಾವೇಶ್ವರ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಸಂಜೆ ತಂತ್ರಿವರ್ಯರ ಆಗಮನವಾಗಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕವಾಗಿ ರಾತ್ರಿ ಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು.

ಬಳಿಕ ಸುಳ್ಯ ರಂಗಮಯೂರಿ ಕಲಾ ಶಾಲೆಯ ಕಲಾವಿದರಿಂದ ಶ್ರೀ ವೀರ ಮಣಿಕಂಠ ಎಂಬ ಪೌರಾಣಿಕ ನಾಟಕ ಮತ್ತು ನೃತ್ಯ ಪ್ರದರ್ಶನ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
ಮಾ.೧೨ರಂದು ಬೆಳಿಗ್ಗೆ ಉಷಾಪೂಜೆಯಾಗಿ ಗಣಪತಿ ಹವನ, ಬಿಂಬ ಶುದ್ಧಿ, ಕಲಶಪೂಜೆ, ಕಲಶಾಭಿಷೇಕ, ಸಪರಿವಾರ ದೈವ ದೇವರುಗಳ ತಂಬಿಲ ನಡೆದು ಮಧ್ಯಾಹ್ನ ಪೂಜೆ ನಡೆದು ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು . ಸಂಜೆ ಬಾರ್ಪಣೆ ಮಿತ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ, ರಾತ್ರಿ ದೀಪಾರಾಧನೆಯಾಗಿ ತಾಯಂಬಕ ನಡೆದು ಪೂಜೆಯಾಗಿ ಶ್ರೀ ದೇವರ ಭೂತಬಲಿ ಉತ್ಸವ ವಾಗಿ ವಸಂತ ಕಟ್ಟೆ ಪೂಜೆ ಹಾಗೂ ವಿಶೇಷವಾಗಿ ನೃತ್ಯ ಬಲಿ ಉತ್ಸವ ನಡೆದು ಅನ್ನಸಂತರ್ಪಣೆ ನೆರವೇರಿತು. ಮಾ.೧೩ರಂದು ಬೆಳಿಗ್ಗೆ ಉಷಾಪೂಜೆಯಾಗಿ ಶ್ರೀ ದೇವರ ಬಲಿ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಯಾಗಿ ರಾಜಾಂಗಣ ಪ್ರಸಾದ ವಿತರಣೆಯಾಗಿ ಮಹಾಪೂಜೆಯಾಗಿ ಮಂತ್ರಾಕ್ಷತೆಯ ನಂತರ ಅನ್ನಸಂತರ್ಪಣೆಯೊoದಿಗೆ ಜಾತ್ರೋತ್ಸವವು ಸಮಾಪನಗೊoಡಿತು.ದೇವಳದ ಅಡಳಿತಾಧಿಕಾರಿ ಸ್ರಜನ್ ಎಮ್.ಜಿ, ಸೇವಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು ,ಗಿರಿಜಾಶಂಕರ್ ತುದಿಯಡ್ಕ ,ದಿನೇಶ್ ಕೋಲ್ಚಾರ್, ಸುಧಾಮ ಆಲೆಟ್ಟಿ ,ಬಾಬು ಗೌಡ ತಂಗವೇಲು ನಾಗಪಟ್ಟಣ ,ಕೆ.ವಿ. ಹೇಮನಾಥ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು .ಉತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು .

 

ಧಾರ್ಮಿಕ ಸಭೆ :
ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಕೆದಿಲಾಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು . ಅಧ್ಯಕ್ಷತೆಯನ್ನು ಸೇವಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು ವಹಿಸಿದ್ದರು .ಸದಸ್ಯರಾದ ಗಿರಿಜಾಶಂಕರ್ ತುದಿಯಡ್ಕ ಧಾರ್ಮಿಕ ಉಪನ್ಯಾಸ ನೀಡಿದರು .ವೇದಿಕೆಯಲ್ಲಿ ಆಡಳಿತಾಧಿಕಾರಿ ಸೃಜನ್ ಎ.ಜಿ , ಸದಸ್ಯರಾದ ದಿನೇಶ್ ಕೋಲ್ಚಾರು, ತಂಗವೇಲು ನಾಗಪಟ್ಟಣ, ಬಾಬುಗೌಡ ನಾಗಪಟಣ ಉಪಸ್ಥಿತರಿದ್ದರು .ನಾಗೇಶ್ ರೈ ಕಾರ್ಯಕ್ರಮ ನಿರೂಪಿಸಿದರು .

ಎಂಟು ವರ್ಷದ ಅಧ್ಯಕ್ಷ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ದೇವಳದ ವಠಾರದ ಚಿತ್ರಣವನ್ನು ಬದಲಾಯಿಸುವ ಪ್ರಯತ್ನ ಮಾಡಿದ್ದೇನೆ .ಮನೆ ಮನೆಗೆ ಹೋಗಿ ದೇಣಿಗೆ ಸಂಗ್ರಹ ಮಾಡದೆ ದೇವಳಕ್ಕೆ ಬರುವ ಭಕ್ತಾದಿಗಳ ಧನಸಹಾಯದಿಂದ ಪ್ರತಿ ವರ್ಷ ಉತ್ಸವಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ .ಇದೀಗ ಈ ವರ್ಷ ಅರುವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಸಭಾ ಭವನದ ನಿರ್ಮಾಣದ ಹಂತದಲ್ಲಿದೆ .ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆ – ದಾಮೋದರ ಗೌಡ ನಾರ್ಕೋಡು

ಸನಾತನ ಹಿಂದೂ ಧರ್ಮದಲ್ಲಿ ಮೂರು ವಿಧದ ಆಚರಣೆಗಳಿವೆ .ವ್ರತಾಚರಣೆ ,ಪರ್ವದ ಆಚರಣೆ, ಉತ್ಸವದ ಆಚರಣೆ .ಎಲ್ಲರೂ ಒಟ್ಟು ಸೇರಿ ಮಾಡುವ ಆಚರಣೆ ಉತ್ಸವದ ಆಚರಣೆ .ಉತ್ಸವದ ಸಂದರ್ಭದಲ್ಲಿ ಗರ್ಭಗುಡಿಯಿಂದ ದೇವರು ಹೊರಬಂದು ಭಕ್ತರನ್ನು ಹರಸುತ್ತಾನೆ .ಸನಾತನ ಹಿಂದೂ ಧರ್ಮ ಅತ್ಯಂತ ಶ್ರೇಷ್ಠ ಧರ್ಮವಾಗಿದೆ -ಗಿರಿಜಾಶಂಕರ್ ತುದಿಯಡ್ಕ

ಸುದ್ದಿ ಯೂಟ್ಯೂಬ್ ಚಾನೆಲ್ ಮೂಲಕ ನಾಗಪಟ್ಟಣ ಜಾತ್ರೋತ್ಸವದ ನೇರ ಪ್ರಸಾರವನ್ನು ಮಾಡಲಾಯಿತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.