Breaking News

ಮಾ .18-19: ಎಡಮಲೆ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಅಂಗಡಿಮಜಲು ಎಡಮಲೆ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮಾ.18 ಮತ್ತು 19 ರಂದು ನಡೆಯಲಿದೆ.
ಮಾ.12 ರಂದು ಮುಹೂರ್ತದ ಗೊನೆ ಕಡಿಯಲಾಯಿತು.
ಮಾ.18 ರಂದು ಪೂ.ಗಂಟೆ 10.00 ಕ್ಕೆ ಸ್ಥಳ ಶುದ್ಧಿ,ಆಯುಧ ಶುದ್ಧಿ,ತಂಬಿಲ ಸೇವೆ ನಡೆಯಲಿದೆ.
ಸಂಜೆ ಗಂಟೆ 7.00 ಕ್ಕೆ ಅಂಗಡಿಮಜಲು ಮಾಳ್ಯದಿಂದ ಭಂಡಾರ ತೆಗೆಯುವುದು ರಾತ್ರಿ ಗಂಟೆ 11.30 ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಲಿದೆ.
ಮಾ.19 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ ಮೆಗ್ಯ ನೇಮ ನಡಾವಳಿ ಪ್ರಾರಂಭ,9.30 ಕ್ಕೆ ಪ್ರಸಾದ ವಿತರಣೆ,ಬಟ್ಟಲು ಕಾಣಿಕೆ ನಡೆಯಲಿದೆ.
ಗಂಟೆ 11.30 ಕ್ಕೆ ನಾಯರ್ ದೈವದ ನೇಮ ನಡೆಯಲಿದೆ.
ಮಧ್ಯಾಹ್ನ 12.30 ಕ್ಕೆ ಪುರುಷ ದೈವದ ಮತ್ತು ಉಪದೈವಗಳ ಕೋಲ ನಡೆಯಲಿದೆ.
ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ದೈವದ ಭಂಡಾರವನ್ನು ಅಂಗಡಿಮಜಲು ಮಾಳ್ಯಕ್ಕೆ ಸಾಗಿಸುವುದು.

ಮಾ.18 ರಂದು ಸಂಜೆ ಗಂಟೆ 7.30 ರಿಂದ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.

ಸಾಂಸ್ಕೃತಿ ಕಾರ್ಯಕ್ರಮ : ಸಂಜೆ ಗಂಟೆ 7.00 ರಿಂದ ಸನತ್ ಬರೆಮೇಲುರವರ ಸಂಯೋಜನೆಯಲ್ಲಿ ಯುನೈಟೆಡ್ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.