ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲರ ದಿಢೀರ್ ಬದಲಾವಣೆ

Advt_Headding_Middle
Advt_Headding_Middle

ಮುಜರಾಯಿ ಇಲಾಖೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರನ್ನು ಬದಲಾಯಿಸಿ ದೇಗುಲ ಮತ್ತು ಕಾಲೇಜಿನ ಆಡಳಿತಾಧಿಕಾರಿಯಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಆದೇಶ ನೀಡಿರುವುದಾಗಿ ತಿಳಿದುಬಂದಿದೆ.

ಡಾ. ಗೋವಿಂದ ಎನ್.ಎಸ್.

 

ಉದಯಕುಮಾರ್ ಕೆ.

ವಾಣಿಜ್ಯ ಉಪನ್ಯಾಸಕ ಉದಯಕುಮಾರ್ ಕೆ. ಅವರು ಕಳೆದ ಎಪ್ರಿಲ್ ೩೦ರಂದು ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ನೂತನ ಪ್ರಾಂಶುಪಾಲರಾಗಿ ಇಂಗ್ಲಿಷ್ ಉಪನ್ಯಾಸಕ ಡಾ. ಗೋವಿಂದ ಎನ್.ಎಸ್. ಅವರಿಗೆ ತಕ್ಷಣದಿಂದ ಅಧಿಕಾರ ಸ್ವೀಕರಿಸುವಂತೆ ಆಡಳಿತಾಧಿಕಾರಿಯವರು ಆದೇಶ ನೀಡಿದ್ದು, ಇಂದು ಅವರು ಅಧಿಕಾರ ಸ್ವೀಕರಿಸಿರುವುದಾಗಿ ತಿಳಿದು ಬಂದಿದೆ. ಹಿಂದಿನ ಪ್ರಾಂಶುಪಾಲ ಮಂಜುನಾಥ್ ಭಟ್ ನಿವೃತ್ತಿಯಾದಾಗ ಅರ್ಹತೆ ಆಧಾರದಲ್ಲಿ ಹಿಂದಿ ಉಪನ್ಯಾಸಕಿ ಪಿಎಚ್‌ಡಿ ಪದವೀಧರೆ ಉಷಾ ಅಂಕೋಲೇಕರ್ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ ಅವರು ಆಗ ವೈಯಕ್ತಿಕ ಕಾರಣ ನೀಡಿ ಪ್ರಾಂಶುಪಾಲ ಹುದ್ದೆಗೆ ಉತ್ಸಾಹ ತೋರದೆ ಹಿರಿತನದ ಆಧಾರದಲ್ಲಿ ಉದಯಕುಮಾರ್ ಕೆ. ಅವರಿಗೆ ಬಿಟ್ಟು ಕೊಟ್ಟಿದ್ದರು.
ಇದೀಗ ಪಿಎಚ್‌ಡಿ ಪದವೀಧರರು ಪ್ರಾಂಶುಪಾಲರಾಗಬೇಕು ಅನ್ನುವ ನಿಯಮದ ಹಿನ್ನಲೆಯಲ್ಲಿ ಪಿಎಚ್‌ಡಿ ಪದವೀಧರರಾಗಿರುವ ಗೋವಿಂದ ಎನ್.ಎಸ್. ಅವರನ್ನು ಪ್ರಾಂಶುಪಾಲರಾಗಿ ನೇಮಿಸಿ ಆಡಳಿತಾಧಿಕಾರಿಯವರು ಆದೇಶ ನೀಡಿದರು.
ಈ ಮಧ್ಯೆ ಪಿಎಚ್‌ಡಿ ಪದವೀಧರೆ ಉಷಾ ಅಂಕೋಲೇಕರ್ ಅವರು ಅರ್ಹತೆ ಆಧಾರದಲ್ಲಿ ತಾನು ಪ್ರಾಂಶುಪಾಲ ಹುದ್ದೆ ವಹಿಸಿಕೊಳ್ಳಲು ಸಿದ್ಧವಿರುವುದಾಗಿ ಆಡಳಿತಾಧಿಕಾರಿಗಳಿಗೆ ಲಿಖಿತವಾಗಿ ಪತ್ರ ನೀಡಿರುವುದಾಗಿ ತಿಳಿದುಬಂದಿದೆ.
ಪ್ರಾಂಶುಪಾಲರ ದಿಢೀರ್ ಬದಲಾವಣೆ ಕುರಿತಂತೆ ಸುಬ್ರಹ್ಮಣ್ಯದಲ್ಲಿ ಮತ್ತು ಕಾಲೇಜಿನಲ್ಲಿ ಚರ್ಚೆಗಳು ನಡೆಯುತ್ತಿದೆ. ಉದಯಕುಮಾರ್ ಅವರು ಅಸೌಖ್ಯದ ಕಾರಣದಿಂದ ರಜೆಯಲ್ಲಿದ್ದು, ಪ್ರಭಾರ ಪ್ರಾಂಶುಪಾಲೆ ಉಷಾ ಅಂಕೋಲೇಕರ್ ಅವರಿಂದ ಎಂ.ಎಸ್.ಗೋವಿಂದ ಅವರು ಅಧಿಕಾರ ಸ್ವೀಕರಿಸಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.