ಪಂಜ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Advt_Headding_Middle
Advt_Headding_Middle

ಪಂಜ ಲಯನ್ಸ್ ಕ್ಲಬ್ ಮತ್ತು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಬೆಳಂದೂರು ಇದರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಬೆಳಂದೂರು ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಪಂಜ ಕ್ಲಬ್ ನ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ಕೆ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಶೋಭಿತಾ ಸತೀಶ್ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಮಾಡಿದರು. ಲಯನ್ಸ್ ಜಿಲ್ಲೆ 317 ಡಿ ಇದರ ಸಂಪುಟ ಸದಸ್ಯ ಜಾಕೆ ಮಾಧವ ಗೌಡ, ಉಪನ್ಯಾಸಕಿ ಮಮತಾ, ವಿದ್ಯಾರ್ಥಿ ನಾಯಕಿ ಶ್ರುತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾಲೇಜಿನ ವತಿಯಿಂದ ರಾಜ್ಯಶಾಸ್ತ್ರ ಉಪನ್ಯಾಸಕ ಮಮತಾ ಮತ್ತು ಕಚೇರಿ ಅಧೀಕ್ಷಕಿ ಗೀತಾ .ಜಿ. ರವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ವತಿಯಿಂದ ಡಾ. ಶೋಭಿತಾ ಸತೀಶ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುರೇಶ್ ಕುಮಾರ್ ನಡ್ಕ ಸ್ವಾಗತಿಸಿದರು. ಪುರುಷೋತ್ತಮ ದಂಬೆಕೋಡಿ ಪ್ರಾರ್ಥಿಸಿದರು. ಉಪನ್ಯಾಸಕಿ ಸೌಮ್ಯ ನಿರೂಪಿಸಿದರು. ಉಪನ್ಯಾಸಕ ಸ್ವಾಮಿ ಎಸ್ ವಂದಿಸಿದರು. ಲಯನ್ಸ್ ಸದಸ್ಯರಾದ ಬಾಲಕೃಷ್ಣ ಮೂಲೆಮನೆ, ಸುಂದರ ಗೌಡ ಆರೆಂಬಿ, ಮೋಹನ್ ಎಣ್ಮೂರು, ಅನುರಾಜ ಕಕ್ಯಾನ, ಹಾಗೂ ಮೇದಪ್ಪ ಗೌಡ ಪಂಜದಬೈಲು, ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.