ಕೊಡಿಯಾಲ ಗ್ರಾಮ ಪಂಚಾಯತ್ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

Advt_Headding_Middle
Advt_Headding_Middle

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ,ಕೊಡಿಯಾಲ ಗ್ರಾಮ ಪಂಚಾಯತ್ ನ ಗ್ರಂಥಾಲಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಮಾ‌.14 ರಂದು ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಸಾಲಿಯಾನ್ ರವರು ಉದ್ಘಾಟಿಸಿ ಬಳಿಕ ನಾಮಫಲಕ ಅನಾವರಣಗೊಳಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೂವಪ್ಪ ಗೌಡ ,ಗ್ರಾಮ ಪಂಚಾಯತ್ ಸದಸ್ಯ ಗಣೇಶ ಅಂಗಾರಡ್ಕ,ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್,ಕಂಟ್ರಾಕ್ಟರ್ ಉಕೇಶ್ ಕಟ್ಟಪುಣಿ,ರಾಧಾಕೃಷ್ಣ ಪೊಟ್ರೆ,ನಾರಾಯಣ ನಾಯ್ಕ,ಲೈಬ್ರೇರಿಯನ್ ಉಮಾವತಿ,ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ರಾಜೇಶ್ವರಿ,ಗುರುರಾಜ್,ಹರಿಣಿ,ರೇವತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 


ಕೊರೋನ‌ ರೋಗದ ಸಂಬಂಧ ಸರಕಾರದ ಆದೇಶದಂತೆ ಕಾರ್ಯಕ್ರಮವನ್ನು ಮುಂದೂಡುವ ಬಗ್ಗೆ ಚಿಂತಿಸಿ ಬಳಿಕ ಶಾಸಕರನ್ನು ಉದ್ಘಾಟನೆಗೆ ಆಹ್ವಾನಿಸಲಾಯಿತು. ಆದರೆ ಶಾಸಕರು ಬೇರೆ ಒಂದು ಕಾರ್ಯಕ್ರಮಕ್ಕೆ ಹೋಗಿರುವುದರಿಂದ ಬರಲು ಆಗದೆ ನಂತರ ಗ್ರಾ.ಪಂ.ಅಧ್ಯಕ್ಷರು ಗ್ರಂಥಾಲಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಸಭಾಕಾರ್ಯಕ್ರಮವಿಲ್ಲದೆ ಸರಳವಾಗಿ ಉದ್ಘಾಟನೆ ನಡೆಯಿತು.
ಬೆಳಿಗ್ಗೆ ಗಣಹೋಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.