ಮಾ. 16, 17 : ಪಳ್ಳಿಮಜಲಿನಲ್ಲಿ ಬೃಹತ್ ಸ್ವಲಾತ್ ವಾರ್ಷಿಕೋತ್ಸವ ಹಾಗೂ 2 ದಿನಗಳ ಮತ ಪ್ರಭಾಷಣ

Advt_Headding_Middle
Advt_Headding_Middle

 

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಮಸ್ಜಿದ್ ಅಬೂಬಕ್ಕರ್ ಸಿದ್ದೀಕ್ ಹಾಗೂ ಸಿರಾಜುಲ್ ಇಸ್ಲಾಂ ಕಮಿಟಿ ಇದರ ಆಶ್ರಯದಲ್ಲಿ ನಡೆಯುವ ಅಸ್ವಲಾತು ಕಫೀಲು ಬಿಶ್ಯಾಪಾಅಃ ಇದರ 17ನೇ ಸ್ವಲಾತ್ ವಾರ್ಷಿಕ ಹಾಗೂ 2 ದಿವಸಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮವು ಮಾ. 16 ಹಾಗೂ 17 ರಂದು ಮಸ್ಜಿದ್ ಅಬೂಬಕ್ಕರ್ ಸಿದ್ದೀಕ್ ಪಳ್ಳಿಮಜಲಿನಲ್ಲಿ ನಡೆಯಲಿದೆ.

ಮಾ. 16 ರಂದು ರಾತ್ರಿ 8.00 ಕ್ಕೆ ಬಹು, ಕೆ. ಎಸ್. ಆಟಕೋಯ ತಂಙಳ್ ರವರ ದುಅ ಹಾಗೂ ಉದ್ಘಾಟನೆಯೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಬಹು, ಸಲಾಂ ಸಅದಿ ಕೋಟಕುನ್ನು ಕೇರಳ ರವರು ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಎರಡನೇ ದಿನ ಸಮಾರೋಪ ಸಮಾರಂಭ ಹಾಗೂ ಸ್ವಲಾತ್ ಮಜ್ಲಿಸ್ ಬಹು, ಶೈಖುನಾ ಅಲ್ ಹಾಜ್ ಮಹಮೂದ್ ಫೈಝಿ ಓಲೆಮುಂಡೋವು ರವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಹು, ನೌಫಲ್ ಸಖಾಫಿ ಕಳಸ ರವರು ಮುಖ್ಯಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.