ಎಣ್ಮೂರು : ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ

Advt_Headding_Middle
Advt_Headding_Middle

ಎಣ್ಮೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ.ಯವರಿಗೆ ಹಾಗೂ ವೃತ್ತಿಯಿಂದ ನಿವೃತ್ತರಾದ ಎಡಮಂಗಲ ಶಾಲಾ ಶಿಕ್ಷಕಿ ಶ್ರೀಮತಿ ಲೋಕೇಶ್ವರಿ ಕೆ., ಮದ್ದಡ್ಕ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಎಂ., ಬಾಳಿಲ ವಿದ್ಯಾಬೋಧಿನಿ ಶಾಲಾ ಸಹ ಶಿಕ್ಷಕ ಶಿವಾನಂದ ಕೆ.ಅವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ವಸಂತ ಏನೆಕಲ್ , ಶ್ರೀಮತಿ ಸಂಧ್ಯಾ ಕುಮಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹರಿಪ್ರಸಾದ್ ರೈ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಹಕಾರಿ ಸಂಘದ ಜಿಲ್ಲಾ ಕಾರ್ಯದರ್ಶಿ ತೇಜಪ್ಪ ಎಸ್., ಎಣ್ಮೂರು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೋಕೇಶ್ವರಿ ಎಂ,, ಎಣ್ಮೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ಕೆ., ಪಾಂಡಿಗದ್ದೆ ಶಾಲಾ ಶಿಕ್ಷಕ ಯಶೋಧರ ಕೆ., ಎಣ್ಮೂರು ಕ್ಲಸ್ಟರ್ ನ ಮುಖ್ಯಶಿಕ್ಷಕರುಗಳು, ಸಮಸ್ತ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.