ಕೆವಿಜಿಪಿ : ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಬೀಳ್ಕೊಡುಗೆ

Advt_Headding_Middle
Advt_Headding_Middle

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಹಿರಿಯ ಸ್ವಯಂ ಸೇವಕರಿಗೆ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಪ್ರಾಂಶುಪಾಲ ಜಯಪ್ರಕಾಶ್ ಕೆ. ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಮಧುಕುಮಾರ್ ಬಿ.ಆರ್, ಅನಿಲ್ ಕುಮಾರ್, ಅಧೀಕ್ಷಕ ದನಂಜಯ ಕಲ್ಲುಗದ್ದೆ, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರಾದ ಪ್ರಭುಲಿಂಗ ಡಿ.ಹೆಚ್, ಮಾಲತಿ ಕೆ.ಕೆ, ಕ್ರೀಡಾ ಸಂಯೋಜಕರಾದ ಅಣ್ಣಪ್ಪ ಜಿ.ಕೆ ಹಾಗೂ ಪ್ರಮೋದ್ ಬಿ.ಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಅಭಿನಂದನಾ ಮಾತುಗಳನ್ನಾಡಿ, ಕಳೆದ ಸೆಮೆಸ್ಟೆರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದ ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಸ್ಮರಣಿಕೆ ವಿತರಿಸಿದರು. ಇನ್ನೋರ್ವ ಕಾರ್ಯಕ್ರಮಾಧಿಕಾರಿ ಸುನಿಲ್‌ಕುಮಾರ್ ಎನ್.ಪಿ ಶುಭ ಹಾರೈಸಿದರು. ಕಿರಿಯ ಸ್ವಯಂ ಸೇವಕರ ಪರವಾಗಿ ಸುಬ್ರಹ್ಮಣ್ಯ ಸಿ.ವಿ ಹಾಗೂ ಹಿರಿಯ ಸ್ವಯಂ ಸೇವಕರ ಪರವಾಗಿ ಕಿಶೋರ್ ಎ.ಪಿ ಮತ್ತು ಭವ್ಯಶ್ರೀ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು, ನೂತನ ಪ್ರಾಂಶುಪಾಲ ಜಯಪ್ರಕಾಶ್ ಕೆ, ಎನ್ನೆಸ್ಸೆಸ್ ಸೇವಾಸಂಗಮದ ಕಾರ್ಯದರ್ಶಿ ಸುಜಿತ್ ಎಂ.ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಚರಿತ್ ರೈ ಎಸ್, ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಬಹುಮಾನ ಪಡೆದ ಬಿಂದುಶ್ರೀ, ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಬಹುಮಾನ ಪಡೆದ ಭವ್ಯಶ್ರೀ ಹಾಗೂ ದೇವಶ್ರೀ ಯವರನ್ನು ಸನ್ಮಾನಿಸಲಾಯಿತು. ಎನ್ನೆಸ್ಸೆಸ್ ಚಟುವಟಿಕೆಗಳಿಗೆ ಸಹಕಾರ ನೀಡಿದ ಫಾಲಚಂದ್ರ ವೈ.ವಿ, ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಮನೋಜ್ಞಾ ಎನ್.ಕೆ, ವಿಕ್ರಮ್ ಹಾಗೂ ಗ್ರೀಷ್ಮ, ಮೆಕಾನಿಕಲ್ ವಿಭಾಗದ ನೂತನ ಮುಖ್ಯಸ್ಥ ದೇರಣ್ಣ ರೈ, ಕಾರ್ಯಕ್ರಮಕ್ಕೆ ಸಹಕರಿಸಿದ ರವಿಶಂಕರ್ ಹೊಳ್ಳ ಹಾಗೂ ಧರ್ಮಪಾಲ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಘಟಕ ನಾಯಕರಾದ ಭವಿಷ್ಯತ್ ಸ್ವಾಗತಿಸಿ, ಗ್ರೀಷ್ಮ ವಂದಿಸಿದರು. ಶರಣ್ಯಾ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.