Breaking News

ತೊಡಿಕಾನ : ಸೇತುವೆ ಕಾಮಗಾರಿ ಪರಿಶೀಲನೆ

Advt_Headding_Middle
Advt_Headding_Middle


ತೊಡಿಕಾನ- ಮುಪ್ಪ ಸೇರು- ಕುದುರೆಪಾಯ ಸಂಪರ್ಕ ರಸ್ತೆಯ ಮತ್ಸ್ಯತೀರ್ಥ ಹೊಳೆಗೆ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮ್ ಅವರ ಅನುದಾನದಲ್ಲಿ ಸೇತುವೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಸೇತುವೆ ಸ್ಲ್ಯಾಬ್ ಕಾಂಕ್ರೀಟ್ ನಡೆಯುತ್ತಿರುವ ಸಂದರ್ಭದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಭಿಯಂತರರಾದ ಹನುಮಂತ ರಾಯಪ್ಪ ಮತ್ತು ಕಿರಿಯ ಅಭಿಯಂತರರಾದ ಮಣಿಕಂಠರವರು ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.


ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಧನಲಕ್ಷ್ಮಿ ಅಮೆಮನೆ , ಶ್ರೀಮತಿ ಸುಶೀಲಾ ಪಂಜಿಕೋಡಿ, ಮಲ್ಲಿಕಾರ್ಜುನ ಭಜನಾ ಸಂಘದ ಅಧ್ಯಕ್ಷ ಜನಾರ್ದನ ಬಾಳೆಕಜೆ ಮತ್ತು ಶೇಷಪ್ಪ ಗೌಡ ಬಾಳೆಕಜೆ,  ಮಹೇಶ್ ಕುತ್ತಮೊಟ್ಟೆ, ಆನಂದ ಕಲ್ಲಗದ್ದೆ, ಕೆ ಕೆ ನಾರಾಯಣ,ತೇಜೇಶ್ವರ್ ಕುಂದಲ್ಪಾಡಿ, ಧರ್ಮಪಾಲ ಮುಪ್ಪ ಸೇರು ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.