ಕಲ್ಮಕಾರು ಗ್ರಾಮವನ್ನು ವೈಲ್ಡ ಲೈಫ್‌ನಿಂದ ಹೊರಗಿಡಲು ಕೋರ್ಟ್ ಆದೇಶ

Advt_Headding_Middle
Advt_Headding_Middle

ಕಲ್ಮಕಾರು ಗ್ರಾಮವನ್ನು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಪರಿಸರದ ಸೂP ವಲಯಕ್ಕೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ ಅಧಿಸೂಚನೆಯನ್ನು ಕಲ್ಮಕಾರು ಗ್ರಾಮಕ್ಕೆ ಮಾತ್ರ ಅನ್ವಯವಾಗುವಂತೆ ಇದರಿಂದ ಹೊರಗಿಡುವಂತೆ ಕೋರ್ಟ್ ಆದೇಶವಾಗಿದೆ. ಕೇಂದ್ರ ಸರ್ಕಾರದ ಪ್ರಾಥಮಿಕ ಅಧಿಸೂಚಯಲ್ಲಿ ಕಲ್ಮಕಾರು ಗ್ರಾಮದ ಹೆಸರು ಇರಲಿಲ್ಲ.

ಆದರೆ ಏಕಾಏಕಿ ಅಂತಿಮ ಅಧಿಸೂಚನೆಯಲ್ಲಿ ಕಲ್ಮಕಾರು ವಿನ ಹೆಸರು ಇದ್ದು ಅದರ ಅಧಿಸೂಚನೆ ೨೦೧೭ ರ ಜೂನ್ ನಲ್ಲಿ ಆಗಿತ್ತು. ಈ ಬಗ್ಗೆ ಕಲ್ಮಕಾರಿನ ಮತ್ತು ಬಾಳುಗೋಡಿನ ಕೆಲವರು ಸೇರಿ ಹೈಕೋರ್ಟ್ ಮೆಟ್ಟಿಲೇರಿದ್ದು ಆ ಅಧಿಸೂಚನೆ ರದ್ದುಗೊಳಿಸುವಂತೆ ಕೇಳಿಕೊಂಡಿದ್ದರು. ಇದನ್ನು ಮಾನ್ಯ ಮಾಡಿರುವ ಕೋರ್ಟ್ ಕಲ್ಮಕಾರು ಗ್ರಾಮಕ್ಕೆ ಸೀಮಿತವಾಗುವಂತೆ ಅಂತಿಮ ಅಧಿಸೂಚನೆಯಿಂದ ಕಲ್ಮಕಾರು ಗ್ರಾಮವನ್ನು ಹೊರಗಿಡುವಂತೆ ಆದೇಶ ಮಾಡಿದೆ.

ಈ ಬಗ್ಗೆ ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಕೆ.ಎಸ.ಎನ್ ರಾಜೇಶ್ ಇಡ್ಯಡ್ಕ ಮುಖಾಂತರ ಬೆಂಗಳೂರಿನ ನ್ಯಾಯವಾದಿ ಬಿ.ಪರಮೇಶ್ವರ ಹೆಗ್ಡೆ ಮುಖಾಂತರ ವಾದಿಸಲಾಗಿತ್ತು. ನರೇಂದ್ರ ಬಿಳಿಮಲೆ, ಉದಯ ಕೊಪ್ಪಡ್ಕ, ಲವಿತ, ಶೇಷಪ್ಪ, ದಿ.ಮಹೇಶ್ ಕೆ. ಪಿ, ಶಿವಪ್ಪ, ಗೋಪಾಲಕೃಷ್ಣಾ, ಕೆ ಪಿ ಅನಂತಶ್ಯಾಮ, ಮುಸ್ತಫಾ, ಜಯರಾಮ ಆಲ್ಕಬೆ, ಸೋಮಶೇಖರ ಕಟ್ಟೆಮನೆ, ರಾಧಾಕೃಷ್ಣ ಕಟ್ಟೆಮನೆ, ಜಯಂತ ಬಾಳುಗೋಡು, ಬಾಬು ಕೆ, ಶೀನಪ್ಪ ಪೊಯ್ಯೆ ಮಜಲು, ಭವಿತ್ ಕುರ್ಮಾ, ಶಿವಕುರ್ಮಾ, ರಾಜೇಶ್ ಶಿವಾಲ, ತೇಜಕುರ್ಮಾ, ದೇವಿ ಪ್ರಕಾಶ್ ಊರವರ ಸಹಕಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.