ಸಂಪಾಜೆ ಗ್ರಾಮ ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಸಭೆ

Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಮುಂಡಡ್ಕ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಾ.16 ರಂದು ನಡೆಯಿತು.

ಈ ಸಭೆಯಲ್ಲಿ ತಾಲೂಕು ಮಟ್ಟದ, ಗ್ರಾಮಮಟ್ಟದ ಅಧಿಕಾರಿ ವರ್ಗದವರು ಹಾಜರಿದ್ದು, ಸೂಕ್ತ ಸಲಹೆ ಸೂಚನೆ ನೀಡಿದರು. ಮೆಸ್ಕಾಂ ಇಲಾಖೆಯ ಇಂಜಿನಿಯರ್ ಅಭಿಷೇಕ್‌ರವರು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದಾಗ ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ಪಿ.ಕೆ ಅಬುಶಾಲಿ, ಶ್ರೀಮತಿ ಮೋಹಿನಿ ಪೆಲ್ತಡ್ಕ, ಜಿ.ಕೆ. ಹಮೀದ್ ರವರು ಎಕ್ಸ್‌ಪ್ರೆಸ್ ಲೈನ್ ಕಾಮಗಾರಿಯ ಬಗ್ಗೆ ಮಾತನಾಡಿ ಮಾ. 30ರ ಒಳಗೆ ಮುಗಿಸದೇ ಇದ್ದಲ್ಲಿ ಮೆಸ್ಕಾಂ ಕಛೇರಿಗೆ ಸಾರ್ವಜನಿಕರೊಂದಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಸಂಪಾಜೆಯ ಕೊಪ್ಪದಕಜೆ ವಿದ್ಯುತ್ ಸಮಸ್ಯೆಯ ಬಗ್ಗೆ ಶ್ರೀಮತಿ ಮೋಹಿನಿ ಪೆಲ್ತಡ್ಕ ಪ್ರಸ್ತಾಪಿಸಿದರು. ಕಡೆಪಾಲದ ಬಳಿ ಹಲವು ವರ್ಷಗಳಿಂದ ಟಿಸಿ ಚಾರ್ಜ್ ಮಾಡದ ಬಗ್ಗೆ ಸೋಮಶೇಖರ್ ಕೊಯಿಂಗಾಜೆ ಪ್ರಸ್ತಾಪಿಸಿದರು. ಸುಂದರಿ ಮುಂಡಡ್ಕರವರು ಮುಂಡಡ್ಕ ವಿದ್ಯುತ್ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದರು. ವಿದ್ಯುತ್ ಪದೇ ಪದೇ ಹೋಗುತ್ತಿರುವ ಕುರಿತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿ.ಕೆ ಹಮೀದ್ ಮತ್ತು ಶ್ರೀಮತಿ ಯಶೋದ ಶ್ರೀದರ್‌ರವರು ಪ್ರಸ್ತಾಪಿಸಿದರು. ಗ್ರಾಮ ಕರಣಿಕರಾದ ಮಿಯಾಸಾಬ್ ಮುಲ್ಲಾ ರವರು ಕಂದಾಯ ಇಲಾಖೆಯ ಬಗ್ಗೆ ಪ್ರಸ್ತಾಪಿಸಿದಾಗ ಜಿ.ಕೆ ಹಮೀದ್ ರವರು ಪೋಡಿ ಮುಕ್ತ ಗ್ರಾಮದ ಬಗ್ಗೆ ಹಾಗೂ 120 ಮತ್ತು 123 ಸರ್ವೇ ನಂಬ್ರದಲ್ಲಿ ಪ್ಲಾಟಿಂಗ್ ಆಗದೇ ಇರುವ ಬಗ್ಗೆ ಪ್ರಸ್ತಾಪಿಸಲಾಯಿತು.

ಹಾಗೂ ಸಂಪಾಜೆ ಗ್ರಾಮದ ಹಲವು ಕಡೆ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹೊಳೆಯಲ್ಲಿ ಮರಳು ತುಂಬಿ, ಸ್ಥಳೀಯ ಕೃಷಿಕರಿಗೆ ಹಾಗೂ ಕುಡಿಯುವ ನೀರಿಗೆ ಬಹಳಷ್ಟು ತೊಂದರೆಯಾಗಿರುವ ಬಗ್ಗೆ ಸ್ಥಳೀಯರಿಗೆ ಹಾಗೂ ಗ್ರಾಮ ಪಂಚಾಯತ್‌ಗೆ ಮರಳು ಹೂಳೆತ್ತಲು ಅವಕಾಶ ಕಲ್ಪಿಸುವಂತೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಹಾಗೂ ಗಣಿ ಭೂ-ವಿಜ್ಞಾನ ಇಲಾಖೆ ಹಾಗೂ ಇಓ ತಾಲೂಕು ಪಂಚಾಯತ್ ಸುಳ್ಯರವರ ಗಮನಕ್ಕೆ ತರುವಂತೆ ತೀರ್ಮಾನಿಸಲಾಯಿತು. ಕೊಳೆರೋಗದ ಬಗ್ಗೆ ಕೃಷಿಕರಿಗೆ ಆಗಿರುವ ತೊಂದರೆ ಬಗ್ಗೆ ನಾಗೇಶ್ ಪಿ ಆರ್ ರವರು ಪ್ರಸ್ತಾಪಿಸಿದರು. ಸಂಧ್ಯಾ ಸುರಕ್ಷಾ ಯೋಜನೆ, ಶವ ಸಂಸ್ಕಾರ ಯೋಜನೆಯ ಹಣದ ಬಗ್ಗೆ ಸೋಮಶೇಖರ್ ಕೊಯಿಂಗಾಜೆ ಮತ್ತು ಜಿ.ಕೆ ಹಮೀದ್‌ರವರು ಪ್ರಸ್ತಾಪಿಸಿದರು. ಗ್ರಾಮ ಕರಣಿಕರಾದ ಮಿಯಾಸಾಬ್ ಮುಲ್ಲಾರವರು ಸರಕಾರದಿಂದ ಈವರೆಗೂ ಹಣ ಬಂದಿರುವುದಿಲ್ಲ, ಈ ಬಗ್ಗೆ ಇಲಾಖೆಗೆ ತಿಳಿಸುವುದೆಂದೂ ಹೇಳಿದರು.

ಆರೋಗ್ಯ ಇಲಾಖೆಯ ಬಗ್ಗೆ ಡಾ. ಮಿಥುನ್‌ಕುಮಾರ್ ಅರಂತೋಡು ಆರೋಗ್ಯ ಅಧಿಕಾರಿಯವರು ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ವೈದ್ಯಾಧಿಕಾರಿಯವರು ಮಾತನಾಡಿ ಜನರು ಹೆಚ್ಚಾಗಿ ಗುಂಪು ಸೇರಬಾರದು ಎಂದು ಇನ್ನಿತರ ಬಗ್ಗೆ ಕೊರೋನಾದ ಮಾಹಿತಿಯನ್ನು ನೀಡಿದರು. ಆಗ ವಿಷಯ ಪ್ರಸ್ತಾಪಿಸಿದ ಜಿ.ಕೆ ಹಮೀದ್ ರವರು ಇದಕ್ಕೆ ಇಲಾಖಾ ವತಿಯಿಂದ ಯಾವುದಾದರೂ ಯೋಜನೆಗಳಿವೆಯೇ, ವಿಶೇಷ ವಾರ್ಡ್‌ಗಳಿವೆಯೇ ಎಂದು ಪ್ರಸ್ತಾಪಿಸಿದರು. ಚರ್ಚೆ ಮುಂದುವರೆದು ಸುಳ್ಯದಲ್ಲಿ ಈ ಬಗ್ಗೆ ತರ್ತು ನಿಗಾ ಘಟಕ ಸ್ಥಾಪಿಸಬೇಕು, ೨೪ ಗಂಟೆ ಡಾಕ್ಟರ್ ವ್ಯವಸ್ಥೆಯಿರಬೇಕು ಹಾಗೂ ಬಸ್ಸು ಇನ್ನಿತರ ವಾಹನಗಳಲ್ಲಿ ಜನರು ಒಟ್ಟಿಗೆ ಕುಳಿತುಕೊಂಡು ಹೋಗುವುದರಿಂದ ಸೂಕ್ತ ಪ್ರಾಥಮಿಕ ಚಿಕಿತ್ಸೆಯ ವ್ಯವಸ್ಥೆ ಬರಬೇಕು ಈ ಬಗ್ಗೆ ನಿರ್ಣಯ ಕೈಗೊಂಡು ಡಿಹೆಚ್‌ಓ, ಇಹೆಚ್‌ಓ ರವರ ಗಮನಕ್ಕೆ ತರಬೇಕು ಎಂದು ಜಿ.ಕೆ ಹಮೀದ್ ರವರು ಪ್ರಸ್ತಾಪಿಸಿದರು.

ಅರಣ್ಯ ಇಲಾಖೆಯ ಬಗ್ಗೆ ಚಂದುರವರು ಇಲಾಖಾ ಮಾಹಿತಿ ನೀಡಿದಾಗ ಸೋಮಶೇಖರ್ ಕೊಯಿಂಗಾಜೆ ಹಾಗೂ ಶ್ರೀಮತಿ ಮೋಹಿನಿ ಪೆಲ್ತಡ್ಕ ರವರು ಆನೆಕಂದಕದ ಬಗ್ಗೆ ಹಾಗೂ ಕೃಷಿಕರಿಗೆ ಆಗುವ ತೊಂದರೆಯ ಬಗ್ಗೆ, ಮತ್ತು ಪರಿಹಾರದ ಬಗ್ಗೆ ಕೊಯಿಂಗಾಜೆ ರವರು ಅಸಮಾಧಾನ ವ್ಯಕ್ತಪಡಿಸಿದರು.

ಘನತ್ಯಾಜ್ಯ ಹಾಗೂ 84 ಸಿ ಹಕ್ಕುಪತ್ರ ನೀಡುವಾಗ ಸಾರ್ವಜನಿಕರಿಗೆ ಸಹಕರಿಸಿದ ಅರಣ್ಯ ಇಲಾಖೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಶ್ರೀ ಮೋಹನ್ ನಂಗಾರುರವರು ಇಲಾಖಾ ಮಾಹಿತಿ ನೀಡಿ, ಜಲಾಮೃತ ಯೋಜನೆಯ ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಂದಿನಿ ಮತ್ತು ಅರ್ಷಿಯಾ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಇಲಾಖೆಯಿಂದ ಸಿಗುವ ಸವಲತ್ತು, ಅಂತರ್ಜಾತಿ ವಿವಾಹ, ಸಾಮೂಹಿಕ ವಿವಾಹದ ಬಗ್ಗೆ ಮಾಹಿತಿ ನೀಡಿದರು.
ಪಶು ಸಂಗೋಪನಾ ಇಲಾಖೆಯ ಪಾಲಾಕ್ಷ ರವರು ಮಾಹಿತಿ ನೀಡಿದರು.  ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ದೀಪಿಕಾರವರು ಶಿಶು ಅಭಿವೃದ್ದಿ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಬಹುತೇಕ ಹಾಜರಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ಎಂ.ಕೆ ರವರು ಕೃಷಿಗೆ ಮಂಗಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದರು. ಶ್ರೀಮತಿ ಜಯಂತಿ ಬಂಟೋಡಿ ಮತ್ತು ಶ್ರೀಮತಿ ಪ್ರೇಮಲತಾ ಇವರು ತರಕಾರಿ ಕೃಷಿಗೆ, ಭತ್ತದ ಕೃಷಿಗೆ ನವಿಲುಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಅರಣ್ಯ ಇಲಾಖೆಯ ಚಂದುರವರು ಇಲಾಖೆಯ ಗಮನಕ್ಕೆ ತರಲಾಗುವುದೆಂದು ತಿಳಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಲೆತಿಶ್ಯಾ ಡಿಸೋಜ, ಲೂಕಾಸ್ ಟಿ.ಐ, ಷಣ್ಮುಗಂ ಎಸ್, ಸುಂದರ ಕೆ, ಶ್ರೀಮತಿ ಉಷಾ ಹಾಜರಿದ್ದರು. ಇಲಾಖೆಯ ಪರವಾಗಿ ಶ್ರೀಮತಿ ಶಶಿಕಲಾ ಎಸ್‌ಸಿಡಿಸಿಸಿ ಬ್ಯಾಂಕ್ ಕಲ್ಲುಗುಂಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರಕುಮಾರ್ ರವರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಶ್ರೀಮತಿ ಮೋಹಿನಿ ಪೆಲ್ತಡ್ಕರವರು ಪಡಿತರ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.

ಅಧಿಕಾರಿಗಳಾದ ರುದ್ರೇಶ್ ನಾಯ್ಕ, ಕೆ.ಆರ್ ಮಂಜುನಾಥ, ಅರಬಣ್ಣ ಪೂಜಾರಿ, ಈಶ್ವರಪ್ಪ, ಕೇಶವ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶೀಲಾವತಿ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಜಯಂತಿ, ಶ್ರೀಮತಿ ಪುಷ್ಪ ಕೆ.ಆರ್, ಶ್ರೀಮತಿ ಶಾರದಾ, ಶ್ರೀಮತಿ ಧರ್ಮಕಲಾ, ಕು| ಹರ್ಷಿತಾಕುಮಾರಿ, ಆರೋಗ್ಯ ಕಾರ್ಯಕರ್ತೆಯರಾದ ಶ್ರೀಮತಿ ಶೀಲಾವತಿ ಮತ್ತು ಶ್ರೀಮತಿ ಹಿಮಲೇಶ್ವರಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮೋಹನಾಂಗಿ, ಶ್ರೀಮತಿ ಕೋಮಲಾಂಗಿ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಸವಿತಾ ರೈ, ಶ್ರೀಮತಿ ಸೌಮ್ಯ ಮತ್ತು ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ನಸೀಮಾ, ಗ್ರಾಮ ಪಂಚಾಯತ್ ಪಿಡಿಓ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಕು| ನಂದಿನಿ ಮತ್ತು ಕು| ಅರ್ಷಿಯಾ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಭರತ್, ಶ್ರೀಮತಿ ಗೋಪಮ್ಮ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಮಧುರಾ, ಶ್ರೀ ಭೋಜಪ್ಪ ರವರು ಹಾಜರಿದ್ದರು.
ಕೃಷಿ ಇಲಾಖೆಯ ವತಿಯಿಂದ ಪ್ರಾರ್ಥನೆಯನ್ನು ನೆರವೇರಿಸಲಾಯಿತು, ಕಾರ್ಯದರ್ಶಿಯವರಾದ ಶ್ರೀ ವಿದ್ಯಾಧರ ರವರು ಸ್ವಾಗತವನ್ನು ಮಾಡಿ, ಶ್ರೀ ಜಿ.ಕೆ. ಹಮೀದ್ ರವರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.