ಕೊಲ್ಲಮೊಗ್ರು ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಂಪನ್ನ

Advt_Headding_Middle
Advt_Headding_Middle

 


ಕೊಲ್ಲಮೊಗ್ರು ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮಾ.೧೫ ಮತ್ತುಮಾ.೧೬ ರಂದು ನಡೆಯಿತು.ಮಾ. ೧೫ ರ ಸಂಜೆ ಭಂಡಾರ ತೆಗೆದು ಮೆಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ರಾತ್ರಿ ಕಲ್ಮಕಾರು ಅಂಗನವಾಡಿ, ಗಡಿಕಲ್ಲು ಕಿ.ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಬಳಿಕ ಕುಳಿಚಾಟ ನಡೆಯಿತು. ಮಾ.೧೬ ರ ಪ್ರಾತ: ಕಾಲ ಶ್ರೀ ವಿಷ್ಣು ಮೂರ್ತಿ ದೈವದ ಅಗ್ನಿ ಪ್ರವೇಶ ಕಾರ್ಯಕ್ರಮ ಜರಗಿ ಮಾರಿಕಳ, ಪ್ರಸಾದ ವಿತರಣೆ ನಡೆಯಿತು. ಆ ಬಳಿಕ ಗುಳಿಗರಾಜ ದೈವದ ನೇಮೋತ್ಸವ ನಡೆಯಿತು. ಗಡಿಕಲ್ಲು ಶ್ರೀವಿಷ್ಣು ಪ್ರೆಂಡ್ಸ್ ಸ್ವಚ್ಚತಾ ಕಾರ್ಯ ನೆರವೇರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.