ಗುತ್ತಿಗಾರು: ಭಜನಾ ತರಬೇತಿ ಸಮಾರೋಪ ಕಾರ್ಯಕ್ರಮ

Advt_Headding_Middle
Advt_Headding_Middle

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರ್ಕಂಜದ ಲಕ್ಷ್ಮೀ ಪಾವನ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕಳೆದ 3 ತಿಂಗಳಿಂದ ನಡೆದ ಭಜನಾ ತರಬೇತಿ ಸಮಾರೋಪ ಕಾರ್ಯಕ್ರಮ ನಡೆಯಿತು.ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಪ್ರಾಸ್ತಾವಿಕ ಮಾತನಾಡಿ ಭಜನೆ ತರಬೇತಿಯ ಉದ್ದೇಶವನ್ನು ವಿವರಿಸಿದರು.

ಕಲಿಯುಗದಲ್ಲಿ ಭಜನೆಯು ದೇವರನ್ನು ಒಲಿಸಲು ಇರುವ ಸುಲಭ ಮಾರ್ಗ ಎಂದರು.ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋನಪ್ಪ ಪೂಜಾರಿ ಮಾತನಾಡಿ ಗ್ರಾಮದಲ್ಲಿ ಮಹಿಳೆಯರು ಕುಣಿತ ಭಜನೆಯನ್ನು ಕಲಿತಿರುವುದು ವಿಶೇಷವಾಗಿದೆ.ಈ ಭಜನಾ ತಂಡವು ನಮ್ಮ ಊರಿನಲ್ಲಿ ಮತ್ತು ಪರವೂರಿನಲ್ಲಿ ಭಜನೆ ಸೇವೆಯನ್ನು ನೀಡಿ ನಮ್ಮ ಊರಿಗೆ ಒಳ್ಳೆಯ ಹೆಸರು ಬರುವಂತಾಗಲಿ ಎಂದು ಶುಭಹಾರೈಸಿದರು.

ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷರಾದ ಮಹಾಬಲ ಕಟ್ಟಕೊಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ತರಬೇತುದಾರರು ಅಶೋಕ್ ಕನಕಮಜಲು, ಒಕ್ಕೂಟ ಅಧ್ಯಕ್ಷರಾದ ರೋಹಿಣಿ, ಉಪಾಧ್ಯಕ್ಷರು ವೇಣುಗೋಪಾಲ್, ಕಾರ್ಯದರ್ಶಿ ಭರತೇಶ್ , ಸರಸ್ವತಿ ಕಕ್ಕಾಡು, ಗಿರಿಜಾ, ಮಂಜುನಾಥ್ ಪುರುಷ, ಸೇವಾಪ್ರತಿನಿಧಿ ಬಾಲಕೃಷ್ಣ ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.ಭಾಗವಹಿಸಿದವರಿಗೆ ತಾಳವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.