ಡಾ. ಆಂಟೋನಿ ಪಿ.ಜೆ.ಯವರಿಗೆ ಗಡಿನಾಡ ಧ್ವನಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ

Advt_Headding_Middle
Advt_Headding_Middle

 

ಗಡಿನಾಡ ಧ್ವನಿ ,ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಆಂಟೋನಿ ಪಿ.ಜೆ.ಯವರು ಆಯ್ಕೆ ಯಾಗಿರುತ್ತಾರೆ.

ಎಲ್ಲಾ ಕ್ಷೇತ್ರದ ಸಾಧನೆಗಳನ್ನ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಎಪ್ರಿಲ್ ೪ ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಡಾ. ಆಂಟನಿ ಪಿ.ಜೆ ಕಳೆದ ಒಂದು ದಶಕದಿಂದ ಕಂಪ್ಯೂಟರ್‌ಗೆ ಕನ್ನಡ ಬಾಷೆ ವ್ಯಾಕರಣಗಳನ್ನು ಕಲಿಸುವುದರಲ್ಲಿ ಸಂಶೋಧನೆಗಳನ್ನು ಮಾಡಿ, ಕನ್ನಡ ಸ್ವಾಭಾವಿಕ ಭಾಷಾ ಸಂಸ್ಕರಣೆಯಲಿ, ಗಣಕೀಕೃತ ಭಾಷಾ ಪರಿಕರಗಳನ್ನು ಮತ್ತು ಭಾಷಾನುವಾದವನ್ನು ಅಭಿವೃದ್ಧಿ ಪಡಿಸಿ ಹಲವು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಸಿದ್ದ ತುಳು ಬಾಷೆಯನ್ನು ಕಂಪ್ಯೂಟರೀಕರಣಗೊಳಿಸಲು ಪ್ರಥಮ ಹೆಜ್ಜೆಯನ್ನು ಇಟ್ಟಿರುತ್ತಾರೆ. ಗೌಡ ಸಮಾಜದ ಮಾತೃ ಭಾಷೆಯಾದ ಅರೆಕನ್ನಡ (ಅರೆಭಾಷೆ ) ಮತ್ತು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸಿಂ ಬಾಂದವರ ಆಡು ಭಾಷೆಯಾದ ಬ್ಯಾರಿ ಭಾಷೆಯನ್ನು ಗಣಕೀಕೃತ ಗೊಳಿಸುವಲ್ಲಿ ಸಂಶೋಧನೆಗಳನ್ನು ಕೈಗೊಂಡಿರುತ್ತಾರೆ. ಇವರ ಸಂಶೋಧನೆಗಳಲ್ಲಿ ಹೆಚ್ಚಿನದೆಲ್ಲವೂ ಕನ್ನಡ ಮತ್ತು ತುಳು ಭಾಷೆಯನ್ನು ಕಂಪ್ಯೂಟರೀಕರಣಗೊಳಿಸುವಲ್ಲಿ ಈ ತನಕದ ಪ್ರಥಮ ಹೆಜ್ಜೆಗಳಾಗಿದ್ದು ೨೦ಕ್ಕಿಂತಲೂ ಅಧಿಕ ಭಾಷಾ-ಸಂಸ್ಕರಣೆ ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಮಟ್ಟದ ಟೆಕ್ನಿಕಲ್ ಜೋರ್ನಲ್ಸ್ ಮತ್ತು ಸಮ್ಮೇಳನಗಳಲ್ಲಿ ಪ್ರಕಟಗೊಂಡಿವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.