ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಆನ್‌ಲೈನ್ ಬೋಧನಾ ಚಟುವಟಿಕೆಗಳ ತರಗತಿಗಳಿಗೆ ಚಾಲನೆ

Advt_Headding_Middle
Advt_Headding_Middle

 

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ| ರೇಣುಕಾಪ್ರಸಾದ್ ಕೆ.ವಿ.
ಇವರ ಮಾರ್ಗದರ್ಶನದ ಮೇರೆಗೆ ಆನ್‌ಲೈನ್ ಬೋಧನಾ ತರಗತಿ ನಡೆಸುವ ಕಾರ್ಯಕ್ರಮಕ್ಕೆ ದಿನಾಂಕ ೧೯-೦೩-೨೦೨೦ ರಂದು ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸಂವಹನ, ಯಾವುದೇ ಸಮಯದಲ್ಲಿ ಪಠ್ಯಕ್ಕೆ ಸಂಬಂಧಪಟ್ಟ ನೋಟ್ಸ್, ಪ್ರಾಜೆಕ್ಟ್ ಹಾಗೂ ಇತರ ಬೋಧನಾ ಪರಿಕರಗಳ ವಿನಿಮಯ, ಆನ್‌ಲೈನ್ ವೀಡಿಯೋ ಕ್ಲಾಸ್ ಮುಂತಾದ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಶಿಕ್ಷಣ ಮತ್ತು ಕಲಿಕೆಯಲ್ಲಿ ಆಧುನಿಕ ತಂತ್ರಾಂಶಗಳ ಬಳಕೆಗೆ ಕೆ.ವಿ.ಜಿ. ಸಮೂಹದ ಎಲ್ಲಾ ವಿದ್ಯಾಸಂಸ್ಥೆಗಳ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಭರತ್ ಪಿ. ಮತ್ತು ಪ್ರೊ. ಪ್ರಮೋದ್ ಕೆ. ಇವರು ತರಬೇತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ
ಡಾ. ಎನ್.ಎ. ಜ್ಞಾನೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಶ್ರೀಧರ್ ಕೆ., ಉಪಪ್ರಾಂಶುಪಾಲರು ಧನ್ಯವಾದ ಸಮರ್ಪಿಸಿದರು. ಈ ಕಾರ್ಯಾಗಾರದಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್, ಕೆ.ವಿ.ಜಿ. ಪಾಲಿಟೆಕ್ನಿಕ್, ಕೆ.ವಿ.ಜಿ. ಐ.ಟಿ.ಐ., ಕೆ.ವಿ.ಜಿ. ಅಮರಜ್ಯೋತಿ ಪಿ.ಯು ಕಾಲೇಜ್ ಮತ್ತು ಕೆ.ವಿ.ಜಿ. ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ಈ ಎಲ್ಲಾ ಸಂಸ್ಥೆಗಳ ಶಿಕ್ಷಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.