Breaking News

ದಂತ ವೈದ್ಯಕೀಯ ಸಂಘದ, ಪ್ರಕಟಣೆ

Advt_Headding_Middle
Advt_Headding_Middle


ಮಾರಣಾಂತಿಕ ಕೊರೋನ ವೈರಸ್ಸು ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಹರಡುವ ಸಾಧ್ಯತೆ ಇದ್ದು ಡೆಂಟಲ್ ಕ್ಲಿನಿಕ್ ಗಳಲ್ಲಿಯೂ ಕೋವಿಡ್-19 ಪ್ರಸರಣದ ಸಾಧ್ಯತೆ ಅಧಿಕ ಇರುವುದರಿಂದ ಸುಳ್ಯದ ಎಲ್ಲಾ ದಂತ ಚಿಕಿತ್ಸಾ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿರುತ್ತದೆ. ಇತರ ಚಿಕಿತ್ಸೆಗಳಾದ ಫಿಲ್ಲಿಂಗ್, ಹಲ್ಲು ಶುಚಿಗೊಳಿಸುವುದು, ಹಲ್ಲಿನ ಸೆಟ್ ರಚನೆ ಮುಂತಾದುವುಗಳನ್ನು ನೀಡಲು ಅಸಾಧ್ಯವಾಗಿದ್ದು ಸಾರ್ವಜನಿಕರು ಈ ಸಂದರ್ಭವನ್ನು ಅರ್ಥೈಸಿಕೊಂಡು ದಂತ ವೈದ್ಯರುಗಳೊಂದಿಗೆ ಸಹಕರಿಸಿ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿ ಭಾರತೀಯ ದಂತ ವೈದ್ಯಕೀಯ ಸಂಘ, ಸುಳ್ಯ ಶಾಖೆಯ ಅಧ್ಯಕ್ಷ ಡಾ. ಜಯಪ್ರಸಾದ ಆನೆಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಕೂಡಾ ಸಣ್ಣಪುಟ್ಟ ಸಮಸ್ಯೆಗಳಿಗಾಗಿ, ಹಾಗೂ ತುರ್ತು ಇಲ್ಲದ ಚಿಕಿತ್ಸೆಗಳಿಗಾಗಿ ದಂತ ಚಿಕಿತ್ಸಾಲಯಗಳಿಗೆ ಭೇಟಿ ನೀಡುವುದನ್ನು ಸ್ವಲ್ಪ ದಿನಗಳ ಕಾಲ ಅಂದರೆ ಮಾರ್ಚ್ 31ರ ವರೆಗೆ ಅಥವಾ ಮುಂದಿನ ಪ್ರಕಟಣೆಯ ವರೆಗೆ ಮುಂದೂಡಬೇಕಾಗಿ ವಿನಂತಿಸಿದ್ದಾರೆ. ತುರ್ತು ಚಿಕಿತ್ಸೆಗಳಿಗಾಗಿ ನಿಮ್ಮ ದಂತವೈದ್ಯರನ್ನು ಫೋನ್ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.