Breaking News

ಅಮೈಮಡಿಯಾರು: ಕೊರೋನಾ ವೈರಸ್ ಮಾಹಿತಿ ಶಿಬಿರ

Advt_Headding_Middle
Advt_Headding_Middle

ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು,ಆರೋಗ್ಯ ಇಲಾಖೆ ಉಪ ಕೇಂದ್ರ ಉಬರಡ್ಕ ಮಿತ್ತೂರು, ವಿನಾಯಕ ಮಿತ್ರ ಬಳಗ ಅಮೈಮಡಿಯಾರು, ಅಂಗನವಾಡಿ ಕೇಂದ್ರ ಅಮೈಮಡಿಯಾರು ಇದರ ವತಿಯಿಂದ ಕೊರೋನ ವೈರಸ್ ಕುರಿತಂತೆ ಮಾಹಿತಿ ಕಾರ್ಯಕ್ರಮ ಅಮೈಮಡಿಯಾರು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಕೊರೋನ ವೈರಸ್ ಹರಡುವ ಸಾಧ್ಯತೆ ಹಾಗೂ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರೇವತಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಗ್ರಾ.ಪಂ ಸದಸ್ಯ ಹರೀಶ್ ಉಬರಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮತಿ ಭವ್ಯ, ಅಮೈಮಡಿಯಾರು ಶಾಲಾ ಮುಖ್ಯ ಗುರು ಪದ್ಮನಾಭ ಅತ್ಯಾಡಿ, ಮಿತ್ರ ಬಳಗದ ಉಪಾಧ್ಯಕ್ಷ ಗಣೇಶ್ ಸೂಂತೋಡು, ಪೂರ್ವಾದ್ಯಕ್ಷ ಗಿರೀಶ್ ಪಾಲಡ್ಕ, ಲೋಕೇಶ್ ಕೋಟ್ಯಾನ್, ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ಶೋಭಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.