Breaking News

ಮಿಲ್ಕ್ ಮಾಸ್ಟರ್ ಪಲ್ಲತ್ತಡ್ಕ ರಾಘವ ಗೌಡರಿಗೆ ಶ್ರದ್ದಾಂಜಲಿ

Advt_Headding_Middle
Advt_Headding_Middle

ದೂರದೃಷ್ಟಿಯ ಮಾದರಿ ವ್ಯಕ್ತಿತ್ವ : ಎಂ.ಬಿ. ಸದಾಶಿವ

ಸಮಾಜಮುಖಿಯಾದ ಸರ್ವಾಂಗೀಣ ಸಾಧಕ : ನಾಯರ್‌ಕೆರೆ


ಇತ್ತೀಚೆಗೆ ನಿಧನರಾದ ಮಿಲ್ಕ್ ಮಾಸ್ಟರ್ ಪಲ್ಲತ್ತಡ್ಕ ರಾಘವ ಗೌಡರ ಶ್ರದ್ದಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆ ಕಾರ್ಯಕ್ರಮವು ಅವರ ಸ್ವಗೃಹದಲ್ಲಿ ಇಂದು ನೆರವೇರಿತು.
ದಿ. ರಾಘವ ಗೌಡರ ಸಹೋದರ ರಾಮಚಂದ್ರ ಗೌಡ ಪಲ್ಲತ್ತಡ್ಕ ಮೃತರ ಭಾವಚಿತ್ರಕ್ಕೆ ದೀಪ ಬೆಳಗಿಸಿದರು.


ನುಡಿನಮನ ಸಲ್ಲಿಸಿದ ಸಾಮಾಜಿಕ ಧುರೀಣ ಎಂ.ಬಿ.ಸದಾಶಿವ ಮಾತನಾಡಿ, ರಾಘವ ಗೌಡರದು ದೂರದೃಷ್ಟಿಯ ವ್ಯಕ್ತಿತ್ವ. ಸಮಾಜವನ್ನು, ಕುಟುಂಬವನ್ನು ಬೆಳಗಿಸಿದ ರಾಘವ ಗೌಡರ ಬೆರಗಿನ ಸಾಧನೆಯೇ ನಾವೆಲ್ಲಾ ಹೆಮ್ಮೆ ಪಡುವಂತದ್ದು. ಮಾದರಿಯಾದ ಸಾಧನೆಯನ್ನು ಮತ್ತು ಆದರ್ಶಗಳನ್ನು ಅವರು ನೀಡಿದ್ದಾರೆ ಎಂದು ಹೇಳಿದರು.

 


ನುಡಿನಮನ ಸಲ್ಲಿಸಿದ ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆಯವರು, ಹಳ್ಳಿಯಲ್ಲಿ ಹುಟ್ಟಿ ತನ್ನ ಸಾಧನೆ ಮತ್ತು ಶೋಧನೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮತ್ತು ಗೌರವ ಪಡೆದ ರಾಘವ ಗೌಡರ ಮೂಲಕ ಇಂದು ಸಾವಿರಾರು ಕುಟುಂಬಗಳು ಪ್ರಯೋಜನ ಪಡೆಯುತ್ತಿದೆ. ಅವರ ಸಂಶೋಧನಾ ಸಾಮರ್ಥ್ಯ, ಸಮಾಜಮುಖಿ ವ್ಯಕ್ತಿತ್ವ ಹಾಗೂ ಸಮದರ್ಶಿತ್ವದ ನಡವಳಿಕೆಯಿಂದ ನಾಡು ಬೆಳಗಿದೆ ಎಂದರು.

 

ಊರವರ ಪರವಾಗಿ ಮಾತನಾಡಿದ ದಿವೀಶ್ ಗೌಡ ಮುರುಳ್ಯ ಅವರು, ರಾಘವ ಗೌಡರ ಸಾಧನೆಯಿಂದ ಈ ನೆಲ ಕೂಡಾ ಹೆಮ್ಮೆ ಮತ್ತು ಗೌರವ ಪಡುವಂತಾಗಿದೆ. ಇದು ಊರವರ ಭಾಗ್ಯ ಎಂದರು. ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು.
ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾರು ಮಂದಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಬಾಲಚಂದ್ರ ಗೌಡ ಪಲ್ಲತ್ತಡ್ಕ, ಉಮೇಶ್ ಗೌಡ ಪಲ್ಲತ್ತಡ್ಕ, ಶ್ರೀಮತಿ ಲೀಲಾವತಿ ರಾಘವ ಗೌಡ, ಶ್ರೀಮತಿ ಮೈನಾ ಮತ್ತು ಕುಸುಮಾಧರ ಕೇಪಳಕಜೆ, ಶ್ರೀಮತಿ ಮಧು ಮತ್ತು ಯತೀಶ್ ಪಾಲೊಳಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.