ಡಾ. ಉಮ್ಮರ್ ಬೀಜದಕಟ್ಟೆಯವರಿಗೆ ಗಡಿನಾಡ ಧ್ವನಿ ಜ್ಞಾನ ಭೂಷಣ ರಾಷ್ಟ್ರೀಯ ಪ್ರಶಸ್ತಿ

Advt_Headding_Middle
Advt_Headding_Middle


ಬೆಂಗಳೂರಿನ ಫಾರ್ಮೇಡ್ ಗ್ರೂಪ್ಸ್ ಆಫ್ ಕಂಪನಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಉಮ್ಮರ್ ಬೀಜದಕಟ್ಟೆಯವರು ಗಡಿನಾಡ ಧ್ವನಿ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಕೊಡಮಾಡುವ ಗಡಿನಾಡ ಧ್ವನಿ ಜ್ಞಾನ ಭೂಷಣ ರಾಷ್ಟ್ರೀಯ ಪ್ರಶಸ್ತಿ ಭಾಜನರಾಗಿದ್ದಾರೆ. ಇತ್ತೀಚೆಗಷ್ಟೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರು ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವುದಲ್ಲದೆ, ಸಜ್ಜನ ಪ್ರತಿಷ್ಠಾನದ ಮೂಲಕ ತನ್ನ ಹುಟ್ಟೂರಾದ ಬೀಜದಕಟ್ಟೆ ಮತ್ತು ಇತರ ಕಡೆಗಳಲ್ಲಿ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿರುತ್ತಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಏ. 4 ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ನೂತನ ಸಭಾ ಭವನದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.