ಸಂಪಾಜೆ: ದಿವಂಗತ ಬಾಲಚಂದ್ರ ಕಳಗಿ ಯವರ ಪ್ರಥಮ ವರ್ಷದ ಬಲಿದಾನ್ ದಿವಸ್ ಆಚರಣೆ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಅಭಿವೃದ್ಧಿಯ ಹರಿಕಾರ ಜನಮೆಚ್ಚಿದ ಯುವ ನಾಯಕ ಉತ್ತಮ ಸುಮಾಜ ಸೇವಕ, ಸಂಘಟನಾ ಚತುರ ಬಾಲಚಂದ್ರ ಕಳಗಿ ಯವರ ಮನಸು ಮಾತ್ರ ನಮ್ಮಲ್ಲಿ ಚಿರಸ್ಥಾಯಿಯಾಗಿದೆ.
ಆ ಪ್ರಯುಕ್ತ ಮಾ. 19 ರಂದು
ದಿ. ಕಳಗಿಯವರ ಚಿರಸ್ಮರಣೆ ದಿನಾಚರಣೆಯಂದು
ನುಡಿ ನಮನ ಸಭಾ ಕಾರ್ಯಕ್ರಮವು ಸಂಪಾಜೆ ಪಯಸ್ವಿನಿ ಸಹಕಾರಿ ಸದನದ ಶ್ರೀ ಬಾಲಚಂದ್ರ ಕಳಗಿ ವೇದಿಕೆಯಲ್ಲಿ ನಡೆಯಿತು, ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದ ನಂತರ ಮೌನಾಚಾರಣೆಯನ್ನು ಮಾಡಲಾಯಿತು. ಸಮಾರಂಭದಲ್ಲಿ ಕಳಗಿ ಯವರ ತಂದೆ ಕಳಗಿ ವೆಂಕಪ್ಪ, ಪಯಸ್ವಿನಿ ಕೃಷಿ ಪತ್ತಿನ ಅಧ್ಯಕ್ಷರಾದ ಅನಂತ ಉರುಬೈಲು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್ , ಕಳಗಿ ಯವರ ಧರ್ಮಪತ್ನಿ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಚಿ.ನಾ ಸೋಮೇಶ್, ಖ್ಯಾತ ಪತ್ರಕರ್ತರು ಮಡಿಕೇರಿ ಇವರು ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಳಗಿ ಅಭಿಮಾನಿ ಬಳಗದ ವತಿಯಿಂದ ಸಂಪಾಜೆ ಸರಕಾರಿ ಶಾಲೆ, ಕೊಯನಾಡು ಸರಕಾರಿ ಶಾಲೆ, ಸಂಯುಕ್ತ ಪದವಿ ಪೂರ್ವ ಕಾಲೇಜು ಇಲ್ಲಿಗೆ ಶ್ರೀಯುತರ ಹೆಸರಿನಲ್ಲಿ ದತ್ತಿನಿಧಿಯ ಬಾಂಡ್ ವಿತರಿಸಲಾಯಿತು. ಕಾರ್ಯಕ್ರಮದ ಸ್ವಾಗತ ಪ್ರಾಸ್ತಾವಿಕವನ್ನು ಕು
ಮಾರ್ ಚೆದ್ಕಾರ್ ಹಾಗೂ ಬಿ.ಜೆ ಯಶೋಧರ ರವರು ಗಣ್ಯರನ್ನು ವಂದಿಸಿದರು.
ಸಮಾರಂಭದಲ್ಲಿ ಸಂಪಾಜೆ ಗ್ರಾಮದ ಸಮಸ್ತ ಗ್ರಾಮಸ್ಥರು ಚುನಾಯಿತ ಪ್ರತಿನಿಧಿಗಳು, ಅಭಿಮಾನಿ ಬಂಧುಗಳು, ಪಕ್ಷದ ಹಿರಿಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.