Breaking News

ಕೊರೊನಾ ತಡೆಯಲು ಮುನ್ನೆಚ್ಚರಿಕೆ ಅಗತ್ಯ

Advt_Headding_Middle
Advt_Headding_Middle

 

ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಮನವಿ

ಕೊರೊನ ವೈರಸ್ ವಿಚಾರವಾಗಿ ಸರ್ಕಾರ ಹಂತದಲ್ಲಿ ಬಹಳಷ್ಟು ಮುಂಜಾಗ್ರತ ಕ್ರಮವನ್ನು ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರ ಸಂಘದ ವತಿಯಿಂದ ಕೆಲವೊಂದು ಮುನ್ನೆಚ್ಚರಿಕೆಗಳನ್ನು ನಾವೆಲ್ಲರೂ ಸೇರಿ ಕೈಗೊಳ್ಳೋಣ ಎಂದು ಸರಕಾರಿ ನೌಕರರ ಸಂಘದ ಸುಳ್ಯ ಶಾಖೆಯ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಟಿ ಮನವಿ ಮಾಡಿಕೊಂಡಿದ್ದಾರೆ.

 

1- ಸರ್ಕಾರಿ ಕಚೇರಿಯ ಒಳಗೆ ಒಬ್ಬ ಸಾಮಾನ್ಯ ಪ್ರಜೆ ಪ್ರವೇಶಿಸುವ ಸಂದರ್ಭ ಕಚೇರಿ ಸಿಬ್ಬಂದಿಯೊಬ್ಬರು ಪ್ರವೇಶದ್ವಾರದಲ್ಲಿ ನೀಡುವ ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಪ್ರವೇಶಿಸುವಂತೆ ಮಾಡುವುದು.
2- ಎಲ್ಲಾ ಕಚೇರಿಯ ಸಿಬ್ಬಂದಿಗಳ ಟೇಬಲಿನ ಮೇಲೆ ಸ್ಯಾನಿಟೈಜರ್ ಇಡುವುದು.
3- ಮಾಸ್ಕ್ ಧರಿಸಿ ಕರ್ತವ್ಯ ಮಾಡುವಂತೆ ಸೂಚಿಸುವುದು. 4- ಮಾನಸಿಕವಾಗಿ ಸದೃಢರಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿ ಮಾಡುವುದು.

ಈ ಮೇಲಿನ ವಿಷಯಗಳ ಬಗ್ಗೆ ನಾವೆಲ್ಲರೂ ಸೇರಿ ನಮ್ಮ ಹಂತದಲ್ಲಿ ಅಂದರೆ,
ಜಿಲ್ಲೆ, ತಾಲ್ಲೂಕು ಶಾಖೆಗಳು ಅವರವರ ಮುಖ್ಯಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆದೇಶಗಳನ್ನು ತಯಾರಿಸಿ ಪ್ರತಿ ಕಚೇರಿಗೆ ರವಾನಿಸುವಂತಾಗಬೇಕು.
ಆರ್ಥಿಕವಾಗಿ ಸದೃಢ ರಾಗಿರುವ ಶಾಖೆಗಳು ಸ್ವಯಿಚ್ಛೆಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಖರೀದಿ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತಾ.
ನಮ್ಮ ಎಲ್ಲಾ ಸರ್ಕಾರಿ ನೌಕರರ ಆರೋಗ್ಯದ ಕಾಳಜಿಯನ್ನು ನೋಡಿಕೊಳ್ಳುವ ದೃಷ್ಟಿಕೋನದಲ್ಲಿ ನಾವೆಲ್ಲರೂ ಕ್ರಮವಹಿಸುವ ಎಂದು ಈ ಮೂಲಕ ತಮ್ಮಲ್ಲಿ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದು ಸರಕಾರಿ ನೌಕರರ ರಾಜ್ಯಧ್ಯಕ್ಷ, ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಮಾಡಿರುವ ಮನವಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಮನವಿಯ ವಿಡಿಯೋ ಕೂಡಾ ವೈರಲ್ ಆಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.