ಸರಕಾರಿ ಕಚೇರಿಗಳಲ್ಲಿ ನೌಕರರ ಆರೋಗ್ಯ ಜಾಗೃತಿ

Advt_Headding_Middle
Advt_Headding_Middle

 

ಸುಳ್ಯ ತಾಲೂಕು ಪಂಚಾಯತ್ ಸೂಚನೆ

ಕೊರೊನಾ ವೈರಸ್ ಭೀತಿಯಿಂದ ಸರಕಾರಿ ಕಚೇರಿಗಳಲ್ಲಿ ನೌಕರರ ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲವು ಸೂಚನೆ ಪಾಲಿಸಬೇಕೆಂದು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಸರಕಾರಿ ನೌಕರರ ಸಂಘ ನೀಡಿರುವ ಮನವಿಯ ಮೇರೆಗೆ ಈ ಆದೇಶಗಳನ್ನು ಮಾಡಲಾಗಿದೆ.

ಸರ್ಕಾರಿ ಕಚೇರಿಯ ಒಳಗೆ ಒಬ್ಬ ಸಾಮಾನ್ಯ ಪ್ರಜೆ ಪ್ರವೇಶಿಸುವ ಸಂದರ್ಭ ಕಚೇರಿ ಸಿಬ್ಬಂದಿಯೊಬ್ಬರು ಪ್ರವೇಶದ್ವಾರದಲ್ಲಿ ನೀಡುವ ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಪ್ರವೇಶಿಸುವಂತೆ ಮಾಡುವುದು.
ಎಲ್ಲಾ ಕಚೇರಿಯ ಸಿಬ್ಬಂದಿಗಳ ಟೇಬಲಿನ ಮೇಲೆ ಸ್ಯಾನಿಟೈಜರ್ ಇಡುವುದು.
3- ಮಾಸ್ಕ್ ಧರಿಸಿ ಕರ್ತವ್ಯ ಮಾಡುವಂತೆ ಸೂಚಿಸುವುದು. 4- ಮಾನಸಿಕವಾಗಿ ಸದೃಢರಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿ ಮಾಡಬೇಕು ಎಂದು ತಾ.ಪಂ. ಇ.ಒ. ಸೂಚನೆ ನೀಡಿದ್ದಾರೆ.

ಈ ಸೂಚನೆಯ ಪ್ರತಿ ಯನ್ನು ಎಲ್ಲಾ ಸರಕಾರಿ ಇಲಾಖೆಗೆ ತಾ.ಪಂ.ನಿಂದ ರವಾನಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.