ಸುಳ್ಯದಲ್ಲಿ ದಿನಸಿ, ತರಕಾರಿ ಅಂಗಡಿಗಳು ಬಂದ್

Advt_Headding_Middle
Advt_Headding_Middle

 

ಸ್ಟಾಕ್ ಮುಗಿದ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ ಮಾಲಕರು

ಅವಶ್ಯ ಸಾಮಾಗ್ರಿ ತರಿಸಿಕೊಳ್ಳಲು ತಹಶೀಲ್ದಾರ್ ಸಲಹೆ

ಮಾ.31ರವರೆಗೆ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12 ರವರೆಗೆ ಅವಶ್ಯಕ ಸೇವೆಗಳಾದ ದಿನಸಿ, ತರಕಾರಿ ಅಂಗಡಿಗಳು ತೆರೆದಿರಬಹುದೆಂದು ಆದೇಶವಿದ್ದರೂ ಸುಳ್ಯ ನಗರದಲ್ಲಿ ಈ ಅಂಗಡಿಗಳು ಬಂದ್ ಆಗಿವೆ. ಇಂದು ಬೆಳಗ್ಗಿನಿಂದಲೇ ಬಾಗಿಲು ತೆರೆದಿಲ್ಲ.

ಇದು ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ. ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿರುವುದೇ ಅಂಗಡಿ ಮುಚ್ಚಲು ಕಾರಣ ಎಂದು ತಿಳಿದು ಬಂದಿದೆ.

ಈ ಕುರಿತು ತಹಶೀಲ್ದಾರ್ ಅನಂತ ಶಂಕರ್ ಅವರನ್ನು ಸಂಪರ್ಕಿಸಿದಾಗ,”ದಿನಸಿ ಸಿಗುವುದಿಲ್ಲ ಎಂಬ ಆತಂಕ ಬೇಡ. ನಾವು ವರ್ತಕರ ಸಂಘದವರ ಜತೆ ಸಂಪರ್ಕದಲ್ಲಿದ್ದೇವೆ. ಅವರು ಅಂಗಡಿ ತೆರೆಯುವಂತೆ ಕೇಳಿಕೊಳ್ಳಲಾಗುವುದು. ಸ್ಟಾಕ್ ಖಾಲಿಯಾದರೆ ಅವರಿಗೆ ತರಿಸಿಕೊಳ್ಳಬಹುದು. ಸಗಟು ಸಾಗಿಸಲೂ ನಿರ್ಬಂಧವಿಲ್ಲ” ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ವಿಷಯ ಮೊದಲೇ ಗೊತ್ತಿದ್ದರಿಂದ ಎಲ್ಲರೂ ನಿನ್ನೆಯೇ ವಸ್ತುಗಳ ಖರೀದಿ ಮಾಡಿದ್ದಾರೆ. ಕೆಲವು ಅಂಗಡಿಗಳಲ್ಲಿ ದಿನಸಿ ಖಾಲಿಯಾಗಿರುವ ಮಾಹಿತಿ ಇದೆ. ಆ ಅಂಗಡಿ ಯವರಲ್ಲಿ ದಿನಸಿ ತರಿಸಲು ವ್ಯವಸ್ಥೆ ಮಾಡಿ, ಜನರಿಗೆ ಸಮಸ್ಯೆ ಯಾಗದಂತೆ ಕ್ರಮ ನೋಡಿಕೊಳ್ಳಲಾಗುವುದು ಎಂದು ತಹಶೀಲ್ದಾರ್ ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಲು ವರ್ತಕ ಸಂಘದ ಅಧ್ಯಕ್ಷರು ಸಂಪರ್ಕಕ್ಕೆ ಲಭ್ಯರಾಗಿಲ್ಲ.

ಅವಶ್ಯಕ ಸೇವೆಗೆ ಯಾವುದೇ ರೀತಿಯಿಂದಲೂ ಕೊರತೆ ಆಗದಂತೆ ತಾಲೂಕು‌ ಆಡಳಿತ ನಿಗಾ ವಹಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.