Breaking News

ಬೆಳ್ಳಾರೆ: ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಪ್ರತಿಷ್ಠೆ, ಒತ್ತೆಕೋಲ ಮುಂದೂಡಿಕೆ

Advt_Headding_Middle
Advt_Headding_Middle


ಅಜಪಿಲ‌ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಸೇವಾ ಸಮಿತಿ ಬೆಳ್ಳಾರೆ ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ನೂತನ ದೈವಸ್ಥಾನದ ಪ್ರತಿಷ್ಠೆ ಏ. 2, 3 ಮತ್ತು ಒತ್ತೆಕೋಲ ನಡಾವಳಿಯು ಏ. 7,8 ರಂದು ನಡೆಯಬೇಕಿತ್ತು. ಆದರೆ ಜಗತ್ತಿನಾದ್ಯಂತ ವ್ಯಾಪಿಸಿರುವ ಮಹಾಮಾರಿ‌ ಕೊರೊನಾದಿಂದಾಗಿ ಸರಕಾರದ ಆದೇಶದಂತೆ ಯಾವುದೇ ಕಾರ್ಯಕ್ರಮ ನಡೆಸದಂತೆ ಆದೇಶವಿರುವುದರಿಂದ ಸದ್ರಿ ಪ್ರತಿಷ್ಠೆ ಮತ್ತು ಒತ್ತೆಕೋಲ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆಯೆಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.