ಕೊರೋನಾ ಭೀತಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಗಂಭೀರ ಪರಿಸ್ಥಿತಿ

Advt_Headding_Middle
Advt_Headding_Middle

 

ಮಾಹಿತಿ ವಿನಿಮಯಕ್ಕೆ ವೇದಿಕೆಯಾಗುತ್ತಿರುವ ಸುದ್ದಿ ವೆಬ್ ಸೈಟ್

ಜನತೆಗೆ ಸುದ್ದಿ ಮತ್ತು ಮಾಹಿತಿ ಸೇವೆಗೆ ನಾವು ಬದ್ಧ, ಸಹಕಾರಕ್ಕೆ ಮನವಿ

ಕೊರೋನಾ ಸೋಂಕಿನ ಕಾರಣ ಕೈಗೊಂಡ ನಿರ್ಬಂಧ ಕ್ರಮಗಳ ಹಿನ್ನೆಲೆಯಲ್ಲಿ ಜನಜೀವನ ಸ್ತಬ್ಧಗೊಂಡು ಎಲ್ಲರೂ ಮನೆಯಲ್ಲೇ ಉಳಿಯುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಸುದ್ದಿ ವೆಬ್ ಸೈಟ್ ಮತ್ತು ಯೂ ಟ್ಯೂಬ್ ಚಾನೆಲ್ ಜನರ ಪಾಲಿಗೆ ಸುಳ್ಯದ ಮತ್ತು ಅಗತ್ಯದ ಸಮಗ್ರ ಸುದ್ದಿ ಮತ್ತು ಮಾಹಿತಿ ವಿನಿಮಯದ ಏಕಮಾತ್ರ ವೇದಿಕೆಯಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರಿಗೆ ಮನೆಯಿಂದ ಹೊರಬರಲಾಗುತ್ತಿಲ್ಲ. ಅವಶ್ಯ ಸಾಮಾಗ್ರಿಗಳನ್ನು ಪಡೆಯಲು ಕೂಡಾ ಕಷ್ಟ ಪಡುವಂತಾಗಿದೆ. ವಾಹನ ಸಂಚಾರ ನಡೆಯುತ್ತಿಲ್ಲವಾದ ಕಾರಣ ಪತ್ರಿಕೆಗಳು ಕೂಡಾ ಸರಿಯಾಗಿ ಸರಬರಾಜಾಗುತ್ತಿಲ್ಲ. ಟಿವಿ ವಾಹಿನಿಗಳಲ್ಲಿ ನಮ್ಮೂರಿನ ವಿಷಯಗಳು ಸರಿಯಾಗಿ ತಿಳಿಯುತ್ತಿಲ್ಲ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಸತ್ಯಾಸತ್ಯತೆ ಜನರಿಗೆ ತಿಳಿಯುತ್ತಿಲ್ಲ. ಜಿಲ್ಲಾಡಳಿತದ ಆದೇಶಗಳು ಪರಿಸ್ಥಿತಿ ನೋಡಿಕೊಂಡು ಬದಲಾಗುತ್ತಿದೆ.

ಈ ಹಂತದಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಸುದ್ದಿ ವೆಬ್ ಸೈಟ್ ಪ್ರಕಟಮಾಡುತ್ತಿದೆ. ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ವಿಶೇಷ ಬುಲೆಟಿನ್ ಗಳು ಪ್ರಸಾರವಾಗುತ್ತಿದೆ.

ಸುದ್ದಿ ವರದಿಗಾರರು ತಾಲೂಕಿನ ಎಲ್ಲ ಕಡೆಗಳಿಂದ ಸಾಕ್ಷಾತ್ ಚಿತ್ರಣ ನೀಡುತ್ತಿದ್ದಾರೆ. ಜನಜೀವನ ಚಿತ್ರಣ, ಜನತೆ ಎದುರಿಸುವ ಸಂಕಷ್ಟ, ಜಿಲ್ಲಾಡಳಿತದ ಆದೇಶ, ಅಧಿಕಾರಿಗಳ ಕ್ರಮ ಮತ್ತು‌ ಸೂಚನೆ, ಪಾಲಿಸಬೇಕಾದ ಜಾಗೃತಿ, ಅಗತ್ಯ ಸೇವೆಗಳ ವಿವರಗಳನ್ನು, ಮುಂದೂಡಿಕೆಯಾಗುತ್ತಿರುವ ಕಾರ್ಯಕ್ರಮಗಳ ಮಾಹಿತಿಯನ್ನು, ತಾಲೂಕು ಆಡಳಿತದ ಸೂಚನೆಗಳನ್ನು ಪ್ರಕಟಿಸುತ್ತಿದೆ. ಇದನ್ನು ಸಾವಿರಾರು ಸಂಖ್ಯೆಯಲ್ಲಿ ಜನ ವೀಕ್ಷಿಸುತ್ತಿದ್ದಾರೆ. ಸುದ್ದಿ ಸಂಸ್ಥೆಯಲ್ಲಿರುವ ಹತ್ತು ಸಾವಿರಕ್ಕೂ ಅಧಿಕ ವಾಟ್ಸಾಪ್ ನಂಬ್ರಗಳಿಗೆ, ಗ್ರಾಮವಾರು ಮತ್ತು ಪರವೂರಿನ ಗುಂಪುಗಳಿಗೆ ಈ ಸುದ್ದಿಗಳ ಲಿಂಕ್ ಶೇರ್ ಆಗುತ್ತಿದೆ. ಆ ಮೂಲಕ ಕ್ಷಣ ಮಾತ್ರದಲ್ಲಿ ಸಾವಿರಾರು ಮಂದಿ ನಿಖರ ಮಾಹಿತಿ ತಿಳಿಯುವಂತಾಗಿದೆ.

ಮುಂದಿನ ದಿನಗಳಲ್ಲೂ ಸಮಗ್ರ ಮಾಹಿತಿಯನ್ನು ನೀಡಲು ಸುದ್ದಿ ಮಾಧ್ಯಮ ಸಂಸ್ಥೆ ಬದ್ಧವಾಗಿದ್ದು ಜನತೆ ಹಾಗೂ ಆಡಳಿತ ಸಹಕಾರ ನೀಡಬೇಕೆಂದು ಕೋರಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.