Breaking News

ಕೊರೊನಾ : ಅಂತರಾಜ್ಯ ಸಂಪರ್ಕ ತಡೆಗೆ ಮಂಡೆಕೋಲು ಗ್ರಾ.ಪಂ. ದಿಟ್ಟ ಕ್ರಮ

Advt_Headding_Middle
Advt_Headding_Middle

 

ಕನ್ಯಾನ, ಮುರೂರಿನಲ್ಲಿ ರಸ್ತೆಗೆ ಮಣ್ಣು ಹಾಕಿ ಕೇರಳ ಸಂಪರ್ಕ ಬಂದ್

ಗ್ರಾ.ಪಂ. ಕಾರ್ಯಕ್ಕೆ ಅರಣ್ಯ ಇಲಾಖೆ ಸಾಥ್

ಕೊರೊನಾ ಹಿನ್ನಲೆಯಲ್ಲಿ ಅಂತರಾಜ್ಯ ಸಂಪರ್ಕವನ್ನು ನಿಷೇಧ ಗೊಳಿಸಿ ಸರಕಾರ ಆದೇಶ ಮಾಡಿದ್ದರೂ ಮಂಡೆ ಕೋಲುನಿಂದಾಗಿ ಕೇರಳಕ್ಕೆ ಖಾಸಗಿ ವಾಹನದ ಮೂಲಕ ಹಲವರು ಹೋಗುತ್ತಿದ್ದರು. ಇದನ್ನು ತಡೆಯಲು ಮಂಡೆಕೋಲು ಗ್ರಾ.ಪಂ. ರಸ್ತೆಗೆ ಮಣ್ಣು ಹಾಕಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ. ಗ್ರಾ.ಪಂ ಕಾರ್ಯಕ್ಕೆ ಅರಣ್ಯ ಇಲಾಖೆ ಕೂಡಾ ಸಾಥ್ ನೀಡಿದೆ.

ಅಂತರಾಜ್ಯ ಸಂಪರ್ಕ ಕಡಿತಗೊಳಿಸಿದ್ದರೂ ಮಂಡೆಕೋಲಿನ ಕನ್ಯಾನ ಹಾಗೂ ಮುರೂರಿನಲ್ಲಿ ಬಾರಿಕೇಡ್ ಇಟ್ಟು ಪೋಲೀಸರು ಸಂಚಾರ ತಡೆದಿದ್ದರು. ಆದರೆ ಕೆಲವರು ಬಾರಿಕೇಡ್ ತೆಗೆದು ಕೇರಳಕ್ಕೆ ಹೋಗುತ್ತಿದ್ದರು. ಅಂತರಾಜ್ಯ ಸಂಪರ್ಕ ಮಾಡಬಾರದೆಂದು ಆದೇಶ ಇದ್ದರೂ ಕೆಲವು ಸಾರ್ವಜನಿಕ ರು ನಿಯಮ ಉಲ್ಲಂಘಿಸುವ ಕುರಿತು ಗ್ರಾ.ಪಂ ಗೆ ದೂರುಗಳು ಬಂದ ಹಿನ್ನಲೆಯಲ್ಲಿ ದಿಟ್ಟ ಕ್ರಮ ಕೈಗೊಂಡಿರುವ ಗ್ರಾ.ಪಂ. ಪಿ.ಡಿ.ಒ. ರವರು ಕನ್ಯಾನ ಮತ್ತು ಮುರೂರಿನಲ್ಲಿ ರಸ್ತೆಗೆ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ.

“ನಿಯಮ ಉಲ್ಲಂಘಿಸಿ ಕೆಲವರು ಕೇರಳಕ್ಕೆ ಹೋಗುವ ದೂರುಗಳಿದ್ದವು. ಆದ್ದರಿಂದ ಈ ಕ್ರಮ ಮಾಡಲಾಗಿದೆ. ಇರುವ ಆದೇಶ ರದ್ದು ಗೊಂಡ ತಕ್ಷಣ ರಸ್ತೆಯ ಮಣ್ಣು ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು” ಎಂದು ಮಂಡೆಕೋಲು ಗ್ರಾ.ಪಂ. ಪಿ.ಡಿ.ಒ. ತಿಳಿದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.